ಒಂದು ಕೋಟಿ ರೂಪಾಯಿ ಗ್ಲ್ಲೆಲುವ ಸುಲಭ ಮಾರ್ಗವೊಂದನ್ನು ಪೆಪ್ಸಿ ಮತ್ತು ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ರೂಪಿಸಿವೆ. ಆದರೆ ಇದಕ್ಕೆ ಅದೃಷ್ಟವೂ ಇರಬೇಕಷ್ಟೆ. ಒಂದು ಸರಿಯಾದ ಉತ್ತರ ನಿಮಗೆ `ಪೆಪ್ಸಿ ಎಕ್ ಕ್ರೋರ್ ಕಾ ಶಾರ್ಟ್‌ಕಟ್~ ತಂದು ಕೊಡಬಲ್ಲದು.
ಇದರಲ್ಲಿ ನೀವು ಒಂದು ದೊಡ್ಡ ಕೆಬಿಸಿ ಸ್ಪೆಷಲ್ ಪೆಪ್ಸಿ ಬಾಟಲ್ ತೆಗೆದುಕೊಳ್ಳಬೇಕು. ಅದರ ಲೇಬಲ್ ಹಿಂದಿರುವ ಸರಳ ಬಹು ಆಯ್ಕೆಯ ಪ್ರಶ್ನೆಯನ್ನು ನೋಡಿ ಮತ್ತು ಸೂಕ್ತ ಉತ್ತರವನ್ನು ಅದರಲ್ಲಿರುವ ವಿಶಿಷ್ಟ ಕೋಡ್‌ನೊಂದಿಗೆ 97188 52525 ಸಂಖ್ಯೆಗೆ ಎಸ್‌ಎಂಎಸ್ ಮಾಡಬೇಕು.
ನವೆಂಬರ್ 16ರಂದು ಸೋನಿ ಟಿವಿಯ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದ ವಿಶೇಷ ಎಪಿಸೋಡ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಇಷ್ಟೇ ಅಲ್ಲ. ಪ್ರತಿದಿನ ಮೂವರು ತಲಾ ಒಂದೊಂದು ಚಿನ್ನದ ನಾಣ್ಯಗಳು ಮತ್ತು ಹನ್ನೆರಡು ಮಂದಿ ಬೆಳ್ಳಿಯ ನಾಣ್ಯಗಳನ್ನು ಗೆಲ್ಲಬಹುದು. ಅಲ್ಲದೆ `ಕೌನ್ ಬನೇಗಾ ಕರೋಡ್‌ಪತಿ~ಯನ್ನು ನೇರವಾಗಿ ಮುಂಬೈನಲ್ಲಿ ವೀಕ್ಷಿಸುವ ಅವಕಾಶ ಪಡೆಯಬಹುದು.
ಈ ಸ್ಪರ್ಧೆಯ ಟಿವಿ ಅನಾವರಣದಲ್ಲಿ ಯಂಗಿಸ್ತಾನ್‌ನ ರಾಕ್ ಸ್ಟಾರ್ ರಣಬೀರ್ ಕಪೂರ್ ಮತ್ತವರ ತಂದೆ ರಿಷಿ ಕಪೂರ್ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಾಹಿತಿಗೆ: http://www.facebook.com/PepsiIndia
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.