ADVERTISEMENT

ಬದುಕು ಭಿತ್ತಿ

ಪಿಕ್ಚರ್ ಪ್ಯಾಲೆಸ್

ಪ್ರಜಾವಾಣಿ ಚಿತ್ರ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST
ಬದುಕು ಭಿತ್ತಿ
ಬದುಕು ಭಿತ್ತಿ   

ಕೆಲವು ಗೆರೆಗಳು ಈಗಲೂ ಢಾಳಾಗಿವೆ. ಅಲ್ಲಲ್ಲಿ ಬಣ್ಣ ಮಾಸಿದ ಚಿತ್ರಗಳು. ವರ್ಷಗಳ ಹಿಂದೆ ನಗರದ ಗೋಡೆಗಳನ್ನು ಕಲಾಭಿತ್ತಿಗಳನ್ನಾಗಿಸಿದ್ದು ಗೊತ್ತೇ ಇದೆ. ಅವುಗಳ ಮುಂದೆ ಬಾಳಬುತ್ತಿಗಾಗಿ ವಿವಿಧ ವ್ಯಾಪಾರದಲ್ಲಿ ತೊಡಗುವವರ ಅಂಗಡಿಗಳು ಎದ್ದೇಳುತ್ತವೆ. ಆಗ ಮೂಡುವುದೇ ಭಿತ್ತಿಗೆ ಬದುಕಿನ ಅರ್ಥ. ನಗರದ ಇಂಥ ವರ್ಣಚಿತ್ರಗಳನ್ನು ಒಳಗೊಂಡ ಗೋಡೆಭಿತ್ತಿಗಳಿಗೆ ಬದುಕು ಮುಖಾಮುಖಿಯಾಗುವುದು ಒಂದು ರೂಪಕದಂತೆ ಕಾಣುತ್ತದೆ. ಫ್ರೀಡಂ ಪಾರ್ಕ್ ಹಾಗೂ ಶಿವಾಜಿನಗರದ ಆಸುಪಾಸು ನಿತ್ಯವೂ ಕಾಣುವ ಈ ಚಿತ್ರಗಳು ಅಕ್ಷರಗಳಿಗೆ ದಕ್ಕುವುದಕ್ಕಿಂತ ಹೆಚ್ಚಾಗಿ ನೋಟಕ್ಕೆ ನಿಲುಕುತ್ತವೆ. ಕಣ್ತುಂಬಿಕೊಳ್ಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.