ಬಹು ದೂರದಿಂದಲೇ ತನ್ನ ಬೇಟೆ ಪತ್ತೆಹಚ್ಚಿ ನೀರಿನ ಬಳಿ ಲ್ಯಾಂಡ್ ಆಗುವಂತೆ ಇಳಿದು, ಚಕ್ಕನೆ ಮೀನನ್ನೋ ಹಾವನ್ನೋ ಹೊತ್ತೊಯ್ಯುವ ಹದ್ದುಗಳನ್ನು ಕಂಡಿದ್ದೇವೆ. ಆದರೆ ಕಬ್ಬನ್ ಉದ್ಯಾನದಲ್ಲಿನ ಕೊಳದಲ್ಲಿ ಹದ್ದುಗಳು ಬನ್ ಹಿಡಿಯುತ್ತವೆ. ನಿತ್ಯವೂ ಬೆಳಿಗ್ಗೆ 9-9.30ರ ಸುಮಾರಿಗೆ ಜನರು ಹದ್ದುಗಳಿಗೆಂದೇ ನೀರಿಗೆ ಬನ್‌ಗಳನ್ನು ಹಾಕುತ್ತಾರೆ. ನಗರದ ನಾಗರಿಕರು ಹದ್ದುಗಳನ್ನೂ ಸಸ್ಯಾಹಾರಿಗಳನ್ನಾಗಿಸಿದ ಪರಿ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.