ADVERTISEMENT

ಬಾಟಲ್‌ಟಾಪ್ ದಾಖಲೆಯ ಗೌತಮ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST
ಬಾಟಲ್‌ಟಾಪ್ ದಾಖಲೆಯ ಗೌತಮ್
ಬಾಟಲ್‌ಟಾಪ್ ದಾಖಲೆಯ ಗೌತಮ್   

ಟೇಬಲ್‌ಟಾಪ್ ಕಂಪ್ಯೂಟರ್ ಗೊತ್ತು, ಲ್ಯಾಪ್‌ಟಾಪ್ ಗೊತ್ತು, ಪಾಮ್‌ಟಾಪ್ ಗೊತ್ತು. ಆದರೆ ಬಾಟಲ್‌ಟಾಪ್ ಗೊತ್ತೇ..? ಕಂಪ್ಯೂಟರ್ ಬಳಕೆಯಲ್ಲಿ ಇಂಥದ್ದೊಂದು ವಿಧಾನ ಕಂಡುಕೊಂಡಿರುವ ಬೆಂಗಳೂರಿನ ಎಸ್.ಗೌತಮ್ ಅದರಲ್ಲಿ ಲಿಮ್ಕಾ ದಾಖಲೆ ಪಡೆದು ಸಾಧನೆ ಮಾಡಿದ್ದಾರೆ.

ಬೆಂಗಳೂರು ಮೆಡಿಕಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಗೌತಮ್, ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಡಿಪ್ಲೊಮಾ ಪದವಿ ಪಡೆದವರು. ಹೀಗಾಗಿ ಕಂಪ್ಯೂಟರ್ ಜತೆಗಿನ ಅವರ ಒಡನಾಟ ಬಹಳ ಹಳೆಯದು. ಕಂಪ್ಯೂಟರ್ ಕೇವಲ ವೃತ್ತಿಗೊಂದು ಉಪಕರಣವಾಗದೆ, ಏನಾದರೂ ಸಾಧಿಸಲು ಒಂದು ಸಾಧನ ಆಗಬೇಕೆಂಬುದು ಅವರ ಮಹದಾಸೆ.

ಇದಕ್ಕೆ ಅವರು ಆಯ್ದುಕೊಂಡಿದ್ದು, ತಂಪು ಪಾನೀಯ ಬಾಟಲಿ ಮೇಲೆ ಕೀಬೋರ್ಡ್ ಇಟ್ಟು, ಕಣ್ಣಿಗೊಂದು ಬಟ್ಟೆ ಕಟ್ಟಿ ಟೈಪ್ ಮಾಡುವುದು. ಈ ಸಾಧನೆಗಾಗಿ ಅವರು ನಾಲ್ಕು ವರ್ಷಗಳ ಕಾಲ ಸತತವಾಗಿ ಅಭ್ಯಾಸ ಮಾಡಿದ್ದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರತಿ ನಿಮಿಷಕ್ಕೆ ಸರಾಸರಿ 58 ಪದಗಳಂತೆ 15 ನಿಮಿಷಗಳ ಕಾಲ ನಿರಂತರವಾಗಿ ಟೈಪ್ ಮಾಡುವ ಮೂಲಕ ಗೌತಮ್ ಲಿಮ್ಕಾ ದಾಖಲೆಯಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದರೂ ಕಂಪ್ಯೂಟರ್ ಟೈಪಿಂಗ್‌ನಲ್ಲಿ ಶೇ 99ರಷ್ಟು ನಿಖರತೆ ಕಾಪಾಡಿಕೊಂಡಿದ್ದೂ ಸಹ ಅವರ ಸಾಧನೆಯ ಒಂದು ಭಾಗವಾಗಿದೆ.

ಲಿಮ್ಕಾ ದಾಖಲೆಯ ನಂತರ ಗಿನ್ನೆಸ್ ದಾಖಲೆಗೆ ಸೇರುವುದು ಅವರ ಮುಂದಿನ ಗುರಿಯಾಗಿದೆ. ಕಂಪ್ಯೂಟರ್ ಕೀಬೋರ್ಡ್ ಪರಿಣತಿ ಮಾತ್ರವಲ್ಲದೆ, ಸಮರ ಕಲೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಎರಡು ಚಿನ್ನದ ಪದಕ ಪಡೆದ ಕೀರ್ತಿ ಅವರದ್ದು.  ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.