ADVERTISEMENT

ಬಾಷಾಗೆ ಕ್ಯಾಸ್ಟ್ರಾಲ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST
ಬಾಷಾಗೆ ಕ್ಯಾಸ್ಟ್ರಾಲ್ ಪ್ರಶಸ್ತಿ
ಬಾಷಾಗೆ ಕ್ಯಾಸ್ಟ್ರಾಲ್ ಪ್ರಶಸ್ತಿ   

ದೇಶದ ಅತ್ಯುತ್ತಮ ಕಾರ್ ಮೆಕ್ಯಾನಿಕ್ ಶೋಧಕ್ಕಾಗಿ ಕ್ಯಾಸ್ಟ್ರಾಲ್ ದೇಶದ ವಿವಿಧ ನಗರಗಳಲ್ಲಿ `ಕ್ಯಾಸ್ಟ್ರಾಲ್ ಗೋಲ್ಡನ್ ಸ್ಪಾನರ್ ಪ್ರಶಸ್ತಿ~ ಸ್ಪರ್ಧೆ ನಡೆಸುತ್ತಿದೆ.

ಬೆಂಗಳೂರಿನಲ್ಲಿ ನಡೆದ ನಗರ ಮಟ್ಟದ ಸಿಟಿ ಫೈನಲ್ಸ್‌ನಲ್ಲಿ  14 ಮೆಕ್ಯಾನಿಕ್‌ಗಳು ಭಾಗವಹಿಸಿದ್ದರು.  ಈ ಪೈಕಿ ಲಕ್ಷ್ಮಿ ವೆಂಕಟೇಶ್ವರ ಕಾರ್ ಗ್ಯಾರೇಜ್‌ನ ಮೆಕ್ಯಾನಿಕ್ ಮೆಹಬೂಬ್ ಬಾಷಾ ಅವರಿಗೆ ಕ್ಯಾಸ್ಟ್ರಾಲ್ ಗೋಲ್ಡನ್ ಸ್ಪಾನರ್ ಪ್ರಶಸ್ತಿ ಮತ್ತು ಆರ್ ಟಿ ನಗರ ಬಳಿಯ ಕನಕ ನಗರದ ಕಾರ್ ಮೆಡಿಕ್ಸ್ ಶೊರೂಂನ ಮೆಕ್ಯಾನಿಕ್ ಅಲೀಂ  ಪಾಶಾ ಅವರಿಗೆ ಸಿಲ್ವರ್ ಸ್ಪಾನರ್ ಪ್ರಶಸ್ತಿ ದೊರೆಯಿತು.

ಇವರಿಬ್ಬರೂ `ಕೌನ್‌ಸಾ ಪಾನ ಕೌನ್‌ಸಾ ನಟ್‌ಬೋಲ್ಟ್, ಜೋ ಜೀತಾ ವಹಿ ಸಿಕಂದರ್ ಮತ್ತು ಭುಜೋ ತೊ ಜಾನೆ~ ಎಂಬ  ಮೂರು ಸುತ್ತಿನ ಸ್ಪರ್ಧೆಗಳಲ್ಲಿ ಇತರ ಮೆಕ್ಯಾನಿಕ್‌ಗಳೊಂದಿಗೆ ಸೆಣಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕಾರು ಮತ್ತು ಅದರ ದುರಸ್ತಿ ಬಗ್ಗೆ ಅವರಿಗಿರುವ ಜ್ಞಾನ, ಕೌಶಲ್ಯವನ್ನು ಒರೆಗೆ ಹಚ್ಚಲಾಯಿತು.

15 ವರ್ಷಗಳ ಅನುಭವ ಹೊಂದಿರುವ ಮೆಹಬೂಬ್ ಬಾಷಾ ಮುಂದಿನ ಹಂತದಲ್ಲಿ ದೇಶದ ಇತರ 16 ನಗರಗಳ ವಿಜೇತರೊಂದಿಗೆ ಅಖಿಲ ಭಾರತ  ಫೈನಲ್ಸ್ ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದು, ಚಿನ್ನ, ಬೆಳ್ಳಿ ಮತ್ತು ಕಂಚು ಪ್ರಶಸ್ತಿಗಾಗಿ ಪೈಪೋಟಿ ನೀಡಲಿದ್ದಾರೆ. ಅಲ್ಲಿ ಗೆದ್ದವರಿಗೆ ಕ್ರಮವಾಗಿ 5 ಲಕ್ಷ ರೂ ನಗದು, ಟಾಟಾ ನ್ಯಾನೊ ಕಾರು, ನಗದು, ಕ್ಯಾಸ್ಟ್ರಾಲ್ ಅಕಾಡೆಮಿಯಲ್ಲಿ ತರಬೇತಿ ದೊರೆಯಲಿದೆ. 

ಇದಕ್ಕೂ ಮುನ್ನ ಜೈಪುರ, ಕೋಲ್ಕತ್ತ, ಅಮೃತಸರ, ಸೂರತ್, ಗುವಾಹಟಿ, ಲಖನೌ, ಚಂಡಿಗಡ, ನಾಗಪುರ ಮತ್ತು ಮುಂಬೈ ನಗರಗಳಲ್ಲಿ `ಕ್ಯಾಸ್ಟ್ರಾಲ್ ಉಸ್ತಾದ್ ಕಾರ್ ಮೆಕ್ಯಾನಿಕ್~ ಪ್ರಶಸ್ತಿಗಾಗಿ ಬಿರುಸಿನ ಸೆಣಸಾಟ ನಡೆದಿತ್ತು.

2008ರಲ್ಲಿ ಸ್ಥಾಪನೆಗೊಂಡಿರುವ `ಕ್ಯಾಸ್ಟ್ರಾಲ್ ಗೋಲ್ಡನ್ ಸ್ಪಾನರ್ ಅವಾರ್ಡ್~, ದೇಶದಲ್ಲಿರುವ ನಿಪುಣ ಹಾಗೂ ಕಾರ್ ರಿಪೇರಿ ಬಗ್ಗೆ ಅಪಾರ ಜ್ಞಾನ ಹೊಂದಿರುವ `ಉಸ್ತಾದ್~ ಕಾರ್ ಮೆಕ್ಯಾನಿಕ್‌ಗಳನ್ನು ಗುರುತಿಸಿ, ಗೌರವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.