ಮೈಕ್ರೋಸಾಫ್ಟ್‌ನ ಸಹಯೋಗದೊಂದಿಗೆ ಎಂವಿಜೆ ಎಂಜಿನಿಯರಿಂಗ್ ಕಾಲೇಜು ಈಚೆಗೆ ‘ಬೂಟ್ ಕ್ಯಾಂಪ್’ ಕಾರ್ಯಾಗಾರ ಆಯೋಜಿಸಿತ್ತು. ಈ ಕಾರ್ಯಾಗಾರವನ್ನು ಮೈಕ್ರೋಸಾಫ್ಟ್‌ನ ಸುಕೃತಿ ಶರ್ಮಾ ಹಾಗೂ ರಕ್ಕಿ ಮುತ್ತುಕುಮಾರ್ ಉದ್ಘಾಟಿಸಿದರು.
ಮೈಕ್ರೋಸಾಫ್ಟ್ ಹಾಗೂ ಎಂವಿಜೆಸಿಇ ನಡುವಿನ ಸಹಯೋಗ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇತ್ತೀಚಿನ ತಂತ್ರಜ್ಞಾನ ಹಾಗೂ ಡ್ರೈವ್ ಇನೋವೇಷನ್ ವಿಷಯಗಳಲ್ಲಿ ತರಬೇತಿ ಹೊಂದಲು ವಿಪುಲ ಅವಕಾಶಗಳನ್ನು ಕಲ್ಪಿಸಿದೆ.
ಮೈಕ್ರೋಸಾಫ್ಟ್ ವಿಂಡೋಸ್ ೮ ಬೂಟ್ ಕ್ಯಾಂಪ್‌ನಲ್ಲಿ ಐಸಿಇ, ಸಿಎಸ್‌ಇ, ಎಂಸಿಎಗಳಿಂದ ೨೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಂಡೋಸ್ ೮ ಅಪ್ಲಿಕೇಷನ್‌ಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬ ವಿಷಯದ ಬಗ್ಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಆರು ವಾರ ನಡೆಯುವ ಈ ಕಾರ್ಯಾಗಾರದಲ್ಲಿ ಮೈಕ್ರೋಸಾಫ್ಟ್‌ನ ವೃತ್ತಿಪರರು ಎಂವಿಜೆಸಿಇ ವಿದ್ಯಾರ್ಥಿಗಳೊಂದಿಗೆ ಪರಸ್ಪರ ಚರ್ಚೆಯಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ವಿಂಡೋಸ್ ೮ ‘ಆಪ್’ಗಳ ವಿನ್ಯಾಸ ಹಾಗೂ ಅನುಷ್ಠಾನದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಎಂವಿಜೆಸಿಇ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಕೆಲವು ಆಪ್‌ಗಳನ್ನು ವಿಂಡೋಸ್ ಆಪ್ ಸ್ಟೋರ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
‘ಎಂವಿಜೆ ಕಾಲೇಜು, ವಿದ್ಯಾರ್ಥಿಗಳು ಹಾಗೂ ಬೋಧಕರ ಕಲಿಯುವ ಬಯಕೆಯನ್ನು ಪ್ರೋತ್ಸಾಹಿಸುತ್ತಾ ಬರುತ್ತಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ವಿಚಾರಗೋಷ್ಠಿಗಳು ಹಾಗೂ ಸಮಾವೇಶಗಳನ್ನು ಆಯೋಜಿಸುತ್ತಾ ಬರುತ್ತಿದೆ. ಇಂದು ಹೊಸ ತಂತ್ರಜ್ಞಾನದ ಜ್ಞಾನ ಅವಶ್ಯಕತೆಯಾಗಿ ಬೆಳೆದಿದೆ’ ಎಂದು ಅಭಿಪ್ರಾಯಪಟ್ಟರು ಎಂವಿಜೆಸಿಇಯ ಪ್ರಾಂಶುಪಾಲ ಷಣ್ಮುಖ ಆರಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.