ADVERTISEMENT

ಬೆಂಗಳೂರು ಬೆಳಕಿಂಡಿ

ಪೃಥ್ವಿ ವಿ.ಜಗನ್ನಾಥ್
Published 20 ಏಪ್ರಿಲ್ 2011, 19:30 IST
Last Updated 20 ಏಪ್ರಿಲ್ 2011, 19:30 IST
ಬೆಂಗಳೂರು ಬೆಳಕಿಂಡಿ
ಬೆಂಗಳೂರು ಬೆಳಕಿಂಡಿ   

ಹೊಸ ಶಿಲಾಯುಗದ ಉತ್ತರಾರ್ಧದಲ್ಲಿಯೇ ಬೆಂಗಳೂರಿನಲ್ಲಿ ಜನವಸತಿ ಇತ್ತು ಎಂಬುದಕ್ಕೆ ಲಾಲ್‌ಬಾಗ್‌ನಲ್ಲಿರುವ ಬೃಹತ್ ಬಂಡೆ ಒಂದು ಪುರಾವೆಯಾಗಿದೆ.

 ನವರತ್ನ ಸ್ಥಾನಮಾನ ಹೊಂದಿದ ಸಾರ್ವಜನಿಕ ವಲಯದ ಭಾರತ್ ಎಲೆಕ್ಟ್ರಾನಿಕ್ಸ್ ಕಾರ್ಖಾನೆ ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿದ್ದು 1954 ರಲ್ಲಿ.

 ಬೆಂಗಳೂರಿನ ಸರ್ಕಾರಿ ಕಾಲೇಜು (ಗ್ಯಾಸ್) ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 1915ರ ಮೇ 3 ರಂದು ಉದ್ಘಾಟನೆಯಾಯಿತು. ಇದನ್ನು ಉದ್ಘಾಟಿಸಿದವರು ಎಚ್.ವಿ. ನಂಜುಂಡಯ್ಯನವರು.

 ಬೆಂಗಳೂರು- ಮುಂಬೈ ನಡುವೆ ವಿಮಾನಯಾನ ಸೇವೆ ಆರಂಭಗೊಂಡಿದ್ದು 1937ರ ಸುಮಾರಿಗೆ.

 ಭಾರತದಲ್ಲಿಯೇ ಮೊಟ್ಟಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ ಬೆಂಗಳೂರು. ಈಗ ಇಲ್ಲಿ ವಿದ್ಯುತ್ ಸರಬರಾಜು ಮಾಡುವ ಜವಾಬ್ದಾರಿ ಬೆಸ್ಕಾಂಗೆ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) ಸೇರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.