ಮುಖ, ಕೈಗಳ ಮೇಲೆ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದುಕೊಂಡಿದ್ದ ಅಭಿಮಾನಿಗಳಿಗೆ ಆಟದ ಖುಷಿ ತುಳುಕಿಸುವ ತವಕ ಒಂದೆಡೆಯಾದರೆ, ತಲೆಗೆ ಬಣ್ಣ ಬಣ್ಣದ ವಿಗ್‌ಗಳನ್ನು ಹಾಕಿಕೊಂಡು, ಚಿಯರ್ ಸ್ಟಿಕ್ ಬಲೂನ್ ಹಿಡಿದು ಕುಣಿದು ಕುಪ್ಪಳಿಸುತ್ತಾ ಆಟಗಾರರನ್ನು ಹುರಿದುಂಬಿಸುವ ಪುಳಕ ಇನ್ನೊಂದೆಡೆ.
ನೃತ್ಯ, ನಗೆಚಟಾಕಿಗಳ ಮುಖೇನ ತಮ್ಮ ಕ್ರೀಡಾಭಿಮಾನ ತೋರುವವರೂ ಅಲ್ಲಿದ್ದರು. ಇತ್ತೀಚೆಗೆ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಕಂಡ ಅಭಿಮಾನಿಗಳ ಸಂತಸದ ಭಾವಭಂಗಿಗಳು ಶ್ರೀಕಂಠ ಶರ್ಮ ಆರ್. ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.