ಮಕ್ಕಳ ತಾಳ ಮೇಳ
`ತಾಲ್~ ಸಂಗೀತ ಮತ್ತು ಲಲಿತ ಕಲೆಗಳ ಸಂಸ್ಥೆ ಬೆಂಗಳೂರಿನ ಜೆಎಸ್ಎಸ್ ಸಭಾಂಗಣದಲ್ಲಿ ಇತ್ತೀಚೆಗೆ `ತಾಲ್ ಫೆಸ್ಟ್~ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಸ್ಥೆಯ ಸುಮಾರು 200 ಮಕ್ಕಳು ವಿವಿಧ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನೀಡಿ ತಮ್ಮ ಪ್ರತಿಭೆ ಮೆರೆದರು.
ಕಳೆದ ಮೂರು ವರ್ಷಗಳ ಹಿಂದೆ ಆರಂಭಗೊಂಡ `ತಾಲ್~ ಸಂಸ್ಥೆಯಲ್ಲಿ ಈಗ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಂಗೀತ ಪ್ರಕಾರಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಕೀಬೋರ್ಡ್ನಿಂದ ಹಿಡಿದು ವಯೊಲಿನ್, ಗಿಟಾರ್ ವಾದ್ಯದವರೆಗೆ ವಾದನ ಮತ್ತು ಹಿಂದುಸ್ತಾನಿ ಗಾಯನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ನೋಂದಾಯಿತವಾಗಿರುವ ಈ ಸಂಸ್ಥೆಯನ್ನು ಬನಾರಸ್ ಮೂಲದ ಮನೀಶ್ ನಾಥ್ ಮಾನ್ ಮತ್ತು ಕಾಜಲ್ ನಾಥ್ ದಂಪತಿ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.