
ಪ್ರಜಾವಾಣಿ ವಾರ್ತೆ
ವೈಟ್‌ಫೀಲ್ಡ್‌ನಲ್ಲಿರುವ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ೨೫ ವಿದ್ಯಾರ್ಥಿಗಳ ತಂಡವು ಸಮೂಹ ನೃತ್ಯ ಪ್ರಸ್ತುತ ಪಡಿಸಿತು. ಚೈಲ್ಡ್ ರೈಟ್ಸ್ ಅಂಡ್ ಯೂ (ಕ್ರೈ) ಸಹಯೋಗದಲ್ಲಿ ನಡೆದ ಈ ಸಮೂಹ ನೃತ್ಯ ಕಾರ್ಯಕ್ರಮವನ್ನು ವಿಘ್ನೇಶ್ ಸಂಯೋಜಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರೈ ಪ್ರಾದೇಶಿಕ ನಿರ್ದೇಶಕಿ ಸುಮಾ ರವಿ, ‘ಸಮೂಹ ನೃತ್ಯ ಮಾಡುತ್ತಿರುವುದು ಇದು ಎರಡನೇ ಸಲ. ಬೆಂಗಳೂರಿನ ಯುವಜನರ ಗಮನ ಸೆಳೆಯುವ ಯತ್ನ ಇದಾಗಿದೆ. ‘ಕ್ರೈ’ನ ವೋಟ್ ಫಾರ್ ಚೈಲ್ಡ್ ರೈಟ್ಸ್‌ನ ದೇಶವ್ಯಾಪಿ ಜಾಗೃತಿ ಆಂದೋಲನದ ಭಾಗವಾಗಿ ಇದನ್ನು ಆಯೋಜಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.