ADVERTISEMENT

ಮದಿರಾ ಸುಂದರಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಭೇಂಡಿಬಜಾರ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ಅಮೆರಿಕನ್ ನಟಿ ಕ್ಯಾಥೆರಿನಾ ಲೊಪೇಜ್ ಬೆಂಗಳೂರಿಗೆ ಬಂದಿದ್ದಳು. ಇನ್ನೊಂದು ವಿಶೇಷ ಎಂದರೆ ಈಕೆ ಹಾಲಿವುಡ್‌ನ ಹೆಸರಾಂತ ನಟಿ, ರೂಪದರ್ಶಿ ಜೆನ್ನಿಫರ್ ಲೊಪೇಜ್‌ಳ ಸೋದರಿ ಸಂಬಂಧಿ. ಯುಬಿ ಸಿಟಿಯ 16ನೇ ಮಹಡಿಯ ಲಾಂಜ್ ಬಾರೊಂದರಲ್ಲಿ ಡಿಸೈನರ್ ಸ್ವಪ್ನಿಲ್ ಶಿಂಧೆ ಮತ್ತು ನಂದಿತಾ ಮೆಹ್ತಾನಿ ವಿನ್ಯಾಸ ಮಾಡಿದ ಮೋಹಕ ಉಡುಪು ಧರಿಸಿ, ಇತರ ರೂಪದರ್ಶಿಗಳೊಂದಿಗೆ ರ್ಯಾಂಪ್ ಮೇಲೆ ಮಿಂಚಿದಳು. ಅಷ್ಟಕ್ಕೂ ಈಕೆ ಬಂದಿದ್ದು ಇಟಲಿಯ ಐಷಾರಾಮಿ ವೋಡ್ಕಾ ಆರ್ಟಿಕ್‌ನ ಬಿಡುಗಡೆಗೆ. ಈಕೆಯ ಹಾಜರಿ ಆ ರಾತ್ರಿಯ ಮಾದಕತೆಗೆ ಮತ್ತಷ್ಟು ಮತ್ತೇರಿಸಿತ್ತು.

ಚಿತ್ರಗಳು: ಕಿಶೋರಕುಮಾರ್ ಬೋಳಾರ್
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.