ADVERTISEMENT

ಮನೆಯಂಗಳದಲ್ಲಿ ಮಾತುಕತೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 19:30 IST
Last Updated 22 ಏಪ್ರಿಲ್ 2011, 19:30 IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ‘ಮನೆಯಂಗಳ ದಲ್ಲಿ ಮಾತುಕತೆ’ಯಲ್ಲಿ ಇತಿಹಾಸ ತಜ್ಞ ಸೂರ್ಯನಾಥ್ ಕಾಮತ್ ಅವರೊಂದಿಗೆ ಸಂವಾದ.

ಇತಿಹಾಸ ಕ್ಷೇತ್ರದ ಅದ್ವಿತೀಯ ಸಾಧಕ, ಸಂಶೋಧಕ, ಶಿಕ್ಷಕ ಡಾ. ಸೂರ್ಯನಾಥ ಉಪೇಂದ್ರ ಕಾಮತ್ ಅವರು ಜನಿಸಿದ್ದು ಬೆಳ್ತಂಗಡಿಯಲ್ಲಿ (1937). ಇತಿಹಾಸ ಉಪನ್ಯಾಸಕರಾಗಿ, ಕರ್ನಾಟಕ ಗೆಜೆಟಿಯರ್ ಮುಖ್ಯ ಸಂಪಾದಕರಾಗಿ, ಪತ್ರಾಗಾರ ನಿರ್ದೇಶಕರಾಗಿ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿದವರು.

ಚರಿತ್ರೆ, ಸಂಶೋಧನೆ, ಸಾಹಿತ್ಯ, ಪತ್ರಿಕಾರಂಗ, ಕಥೆ, ಕಾದಂಬರಿ, ಲಲಿತ ಪ್ರಬಂಧ, ಹರಟೆ ಮುಂತಾದ ಪ್ರಕಾರಗಳಲ್ಲಿ 60ಕ್ಕೂ ಹೆಚ್ಚು ಗ್ರಂಥ ರಚಿಸಿದ್ದಾರೆ. ಜಿಲ್ಲಾ ಗ್ಯಾಸೆಟಿಯರ್‌ಗಳ ಹಿಂದೆ ಇವರ ಶ್ರಮ ಅಪಾರ. ಮುಳ್ಳಿನ ಹಾದಿ, ಕರ್ನಾಟಕದಲ್ಲಿ ಗಾಂಧಿ, ವಿಜಯನಗರದ ಶ್ರೀಕೃಷ್ಣ ದೇವರಾಯ ಮೊದಲಾದ ಕೃತಿಗಳನ್ನು ಹೊರ ತಂದಿದ್ದಾರೆ. ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ನಿವೃತ್ತಿಯ ನಂತರವೂ ಇತಿಹಾಸ ಸಂಶೋಧನೆ, ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಯನ ಮುಂದುವರಿಸಿರುವುದು ಅವರ ಜ್ಞಾನದ ಹಸಿವಿಗೆ ನಿದರ್ಶನ.

ಸ್ಥಳ: ಕನ್ನಡ ಭವನ, ಜೆ.ಸಿ. ರಸ್ತೆ. ಸಂಜೆ 4.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.