ದಿಗಂಬರ ಶ್ರೀ ಮಹಾವೀರ ಸಂಘ: ಕೋನೇನ ಅಗ್ರಹಾರ, ವಿಮಾನಪುರ, (ಎಚ್.ಎ.ಎಲ್), ಭಗವಾನ್ ಮಹಾವೀರ ಜಯಂತಿ ಪ್ರಯುಕ್ತ ಬೆಳಿಗ್ಗೆ 8ಕ್ಕೆ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಂದ ಧ್ವಜಾರೋಹಣ, 8.30ಕ್ಕೆ 108 ಕಲಶಗಳೊಂದಿಗೆ ಮಹಾವೀರ ಸ್ವಾಮಿಯ ಮೆರವಣಿಗೆ, 10.30ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ-ಮಾನಸ ಗಂಗೋತ್ರಿ , ಜೈನಾಲಜಿ ವಿಭಾಗದ ವಿದ್ವಾಂಸ ಶುಭಚಂದ್ರ, ಅತಿಥಿ-ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್. ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಸಾನ್ನಿಧ್ಯ- ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಅಧ್ಯಕ್ಷತೆ- ಶಾಸಕ ಎಸ್. ರಘು. ಅತಿಥಿ- ಸಂಸದ ಪಿ. ಸಿ. ಮೋಹನ್. ನೆಲ್ಯಾಡಿ ಕುಮಾರಿ ಅನುಷಾ ಜೈನ್ ಮತ್ತು ಸಂಗಡಿಗರಿಂದ `ಅಜೇಯ ಬಾಹುಬಲಿ~ ಮತ್ತು `ನೃತ್ಯ ವೈವಿಧ್ಯ~ ಶ್ರೀ ಮೂಕಾಂಬಿಕ ನೃತ್ಯಾಲಯ ಪುತ್ತೂರು ಅವರಿಂದ. `ಜೈನ ಮನೋವಿಶ್ಲೇಷಣೆ ಮತ್ತು ಬಾನುಲಿ ಚಿಂತನೆ~ ಪುಸ್ತಕ ಲೋಕಾರ್ಪಣೆ. ಲೇಖಕ-ಎ.ಎಸ್. ಧರಣೇಂದ್ರಯ್ಯ, ಸಂಪಾದಕರು- ಡಾ.ಎಂ. ಎ. ಜಯಚಂದ್ರ, ಪುಸ್ತಕ ಬಿಡುಗಡೆ- ದಿಗಂಬರ ಜೈನ ಮಹಾವೀರ ಸಂಘದ ಅಧ್ಯಕ್ಷ ಜೆ.ಪದ್ಮನಾಭಯ್ಯ, ಸಂಜೆ 5.
ಕರ್ನಾಟಕ ಜೈನ್ ಅಸೋಸಿಯೇಷನ್: ನಂ. 81, ಕೆ. ಆರ್. ರಸ್ತೆ, ಶಂಕರಪುರಂ, ಮಹಾವೀರಸ್ವಾಮಿ ಜಿನಮಂದಿರದ ಆರನೇ ವಾರ್ಷಿಕೋತ್ಸವ ಮತ್ತು ಮಹಾವೀರ ಜಯಂತಿ ಮಹೋತ್ಸವ. ಬೆಳಿಗ್ಗೆ 7ರಿಂದ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರಿಗೆ ಸನ್ಮಾನ. ಧಾರ್ಮಿಕ ಸಭಾ ಕಾರ್ಯಕ್ರಮ. ಸಾನ್ನಿಧ್ಯ- ದಿಗಂಬರ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಉದ್ಘಾಟನೆ- ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಅಧ್ಯಕ್ಷತೆ- ಅಸೋಸಿಯೇಶನ್‌ನ ಅಧ್ಯಕ್ಷ ಎಸ್. ಜಿತೇಂದ್ರ, ಅತಿಥಿಗಳು- ಎಸ್. ಪಿ. ಎಂ. ಎಲ್‌ನ ಮುಖ್ಯಸ್ಥ ಅನಿಲ್ ಸೇಠಿ, ಡಾ. ಶಾಂತಿನಾಥ ದಿಬ್ಬದ, ಸನ್ಮಾನಿತರು- ಚಾವುಂಡರಾಯ ಪ್ರಶಸ್ತಿ ವಿಜೇತರಾದ ಪ್ರೊ. ಕಮಲ ಹಂಪನಾ, ಆದಿ ಶಂಕರಾಚಾರ್ಯ ರಾಷ್ಟ್ರಿಯ ಪ್ರಶಸ್ತಿ ಪುರಸ್ಕೃತರಾದ ಪಿ. ಎಸ್. ಧರಣೆಪ್ಪ, ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಆನಂದ ಕುಮಾರ್ ಮಗ್ದುಂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಶಾಂತಿನಾಥ ದಿಬ್ಬದ, ವನ್ಯಜೀವಿ ಛಾಯಾಗ್ರಹಣ ವಿಭಾಗ ಪ್ರಶಸ್ತಿ ವಿಜೇತ ಸಂಜಯ್ ಗುಬ್ಬಿ, `ಕಲಾಶ್ರೀ~ ಪ್ರಶಸ್ತಿ ವಿಜೇತೆ ಅದಿತಿ ಅಶೋಕ್. ಸಂಜೆ 6.
ಜೈನ್ ಚಾರಿಟೆಬಲ್ ಹಾಸ್ಪಿಟಲ್: ನಂ. 7, 30ನೇ ಅಡ್ಡರಸ್ತೆ, ತಿಲಕ್‌ನಗರ ಮುಖ್ಯರಸ್ತೆ, ಸ್ವಾಗತ್ ಟಾಕೀಸ್ ಹತ್ತಿರ. ಮಹಾವೀರ ಜಯಂತಿ.ಅತಿಥಿಗಳು- ಮಾಜಿ ಶಾಸಕ ಕೆ. ಎನ್. ಸುಬ್ಬಾರೆಡ್ಡಿ, ಹಾಸ್ಪಿಟಲ್‌ನ ಮುಖ್ಯಸ್ಥ ಎಸ್. ಕೆ. ನಹರ್. ಬೆಳಿಗ್ಗೆ 10.
ಭಗವಾನ್ ಶ್ರೀಪಾರ್ಶ್ವನಾಥಸ್ವಾಮಿ ಚಾರಿಟೆಬಲ್ ಟ್ರಸ್ಟ್: ಮಾಗಡಿ ರಸ್ತೆ, ಮಹಾವೀರ ಸ್ವಾಮಿಯ 2611ನೇ ಜಯಂತ್ಯುತ್ಸವ ಮತ್ತು ಸುವರ್ಣ ಪಾರ್ಶ್ವನಾಥ ಸ್ವಾಮಿಯ 11ನೇ ಪ್ರತಿಷ್ಠಾ ವಾರ್ಷಿಕೋತ್ಸವ. ಬೆಳಿಗ್ಗೆ 7.
ಭಗವಾನ್ ಶ್ರೀ ಶೀತಲನಾಥ ಎಜುಕೇಷನಲ್ ಮತ್ತು ಚಾರಿಟೆಬಲ್ ಟ್ರಸ್ಟ್: ಪುಟ್ಟೇನಹಳ್ಳಿ, ಜೆ.ಪಿ. ನಗರ. ಮಹಾವೀರ ತೀರ್ಥಂಕರರ ಜಯಂತ್ಯುತ್ಸವ. ಬೆಳಿಗ್ಗೆ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.