ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಬುಧವಾರ 69 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಪ್ಪನ ಹುಟ್ಟುಹಬ್ಬವನ್ನು ಮುದ್ದು ಮಗಳು ಅಲಿಯಾ ಭಟ್ ವಿಶಿಷ್ಟವಾಗಿಯೇ ಆಚರಿಸಿದ್ದಾಳೆ. ಬುಡಕಟ್ಟು ಜನರಂತೆ ವಿಭಿನ್ನ ಬಗೆಯ ಟೋಪಿ ತೊಟ್ಟು ಧ್ಯಾನಸ್ಥ ಸ್ಥಿತಿಯಲ್ಲಿರುವ ಅಪ್ಪನ ಫೋಟೊವೊಂದನ್ನು, ಅಲಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಅಷ್ಟೇ ಮುದ್ದಾದ ಒಕ್ಕಣೆಯನ್ನೂ ಬರೆದಿದ್ದಾಳೆ.
‘ನನ್ನ ಪಾಲಿನ ಸೂರ್ಯ, ನನ್ನ ಪಾಲಿನ ಮಳೆ, ನನಗೆ ಪ್ರೀತಿ ಮತ್ತು ನೋವಿನ ಪಾಠವನ್ನು ಹೇಳಿಕೊಟ್ಟ ಪ್ರೀತಿಯ ಮುದುಕ! ಹುಚ್ಚು ಶಿಕ್ಷಕ, ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ವಿಶ್ವದ ಜೀವಿತಾವಧಿಯುದ್ದಕ್ಕೂ ನಾವಿಬ್ಬರೂ ತಂದೆ–ಮಗಳಾಗಿರೋಣ’ ಎಂದು ಆಲಿಯಾ ಭಾವುಕವಾಗಿ ಬರೆದಿದ್ದಾಳೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.