ADVERTISEMENT

ಮಾಲ್‌ಗೆ ಬಂದರು ‘ರಾಜಕುಮಾರಿ’ಯರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಮೊನ್ನೆ ಭಾನುವಾರ ರಾಜಕುಮಾರಿಯರ ಗಡಣವೇ ನೆರೆದಿತ್ತು. ಬರೋಬ್ಬರಿ 400 ಮಂದಿ! ನಖಶಿಖಾಂತ ಶ್ವೇತಾಂಬರಿಗಳಾಗಿದ್ದ ಸಿಂಡ್ರೆಲಾಗಳು, ತಿಳಿಗುಲಾಬಿ ಹಾಗೂ ಆಗಸನೀಲಿ ಬಣ್ಣದ ಉಡುಗೆಯ ರಾಪುನ್ಜಲ್‌ಗಳು ಮತ್ತು ಏರಿಯಲ್‌ಗಳು ಒಬ್ಬರನ್ನೊಬ್ಬರು ಮೀರಿಸುವಂತೆ ಮಿಂಚುತ್ತಿದ್ದರು.

ಡಿಸ್ನಿ ಪ್ರಿನ್ಸೆಸ್ ಅಕಾಡೆಮಿ ಹಮ್ಮಿಕೊಂಡಿದ್ದ ‘ಡಿಸ್ನಿ ರಾಜಕುಮಾರಿ’ ಆಯ್ಕೆ ಪ್ರಕ್ರಿಯೆಯ ಅಂಗವಾಗಿ ಮಾಲ್‌ನಲ್ಲಿ ಭಾನುವಾರ ದಿನವಿಡೀ ನಡೆದ ನೃತ್ಯ, ಶಿಷ್ಟಾಚಾರ ತರಬೇತಿ, ಕಿರೀಟ ತಯಾರಿಕೆ ಮತ್ತು ಡಿಸ್ನಿ ರಾಜಕುಮಾರಿಯ ಅಲಂಕಾರದಂತಹ ಚಟುವಟಿಕೆಗಳಲ್ಲಿ ಈ ‘ರಾಜಕುಮಾರಿ’ಯರು ಪಾಲ್ಗೊಂಡರು.

ಈ ಆಯ್ದ ಕೆಲವು ಪ್ರತಿಭಾವಂತರು ಡಿಸ್ನಿ ಚಾನೆಲ್‌ನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಗಿಟ್ಟಿಸಿಕೊಂಡರು. ಡಿಸ್ನಿ ಯುಟಿವಿಯ ಪರವಾನಗಿ ಮತ್ತು ಚಿಲ್ಲರೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿ ರೋಷಿನಿ ಬಕ್ಷಿ ಒಟ್ಟು ಕಾರ್ಯಕ್ರಮ ಸರಣಿಯ ಬಗ್ಗೆ ಮಾಹಿತಿ ನೀಡಿದರು. ಮಗಳು ನಿಧಿ ಜೊತೆ ಪಾಲ್ಗೊಂಡಿದ್ದ ಚಿತ್ರನಟಿ ಸುಧಾರಾಣಿ ಡಿಸ್ನಿ ಚಾನೆಲ್‌ಗೆ ಆಯ್ಕೆಯಾದ ಮಕ್ಕಳಿಗೆ ಕಿರೀಟ ತೊಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT