ADVERTISEMENT

ಮಿಂಚಿದ ಕೀಚಕ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ನೃತ್ಯಕುಟೀರದ ಕಲಾವಿದರು ಬುಧವಾರ (ಜು.4) ಎ.ಡಿ.ಎ. ರಂಗಮಂದಿರದಲ್ಲಿ ಅಭಿನಯಿಸಿದ ಕೀಚಕ ನೃತ್ಯನಾಟಕ ಪ್ರೇಕ್ಷಕರನ್ನು ಮನಸೂರೆಗೊಳಿಸಿತು.
ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಪ್ರವೃತ್ತಿಯಲ್ಲಿ ಕಲಾವಿದರಾಗಿರುವ ಎಸ್. ನಾಗಭೂಷಣ್ ಅವರು ಈ ನಾಟಕವನ್ನು ನೃತ್ಯರೂಪಕ್ಕೆ ತಂದಿದ್ದಾರೆ. ಜಿ.ಪಿ. ರಾಜರತ್ನಂ ನಾಟಕ ರಚಿಸಿದ್ದಾರೆ.

ನೃತ್ಯನಾಟಕದ ಚೊಚ್ಚಲ ಪ್ರದರ್ಶನ ಇದಾಗಿತ್ತು. ಇಸ್ಮಾಯಿಲ್ ಗೋನಾಳ್ ಅವರ ಸಂಗೀತ ಸಂಯೊಜನೆ ಹಾಗೂ ದೀಪಾಭಟ್ ನಿರ್ದೇಶನದಲ್ಲಿ ನೃತ್ಯಕುಟೀರದ ಕಲಾವಿದರು ಪ್ರದರ್ಶಿಸಿದ ಕೀಚಕ ನೃತ್ಯರೂಪಕ ಅಮೋಘವಾಗಿ ಮೂಡಿಬಂತು.

ಪ್ರೇಕ್ಷಕರ ಕರತಾಡನದ ಪ್ರೋತ್ಸಾಹಕ್ಕೆ ಪಾತ್ರವಾಯಿತು. ಕಲಾವಿದರ ಉನ್ನತ ಮಟ್ಟದ ಅಭಿನಯ, ವೇಷಭೂಷಣ, ರಂಗಸಜ್ಜಿಕೆ, ಬೆಳಕು ವಿನ್ಯಾಸ ಹಾಗೂ ಹಿನ್ನೆಲೆಯಲ್ಲಿ ಮೂಡಿಬಂದ ವಿವಿಧ ದೃಶ್ಯಾವಳಿಗಳು ನಾಟಕದ ಯಶಸ್ಸಿಗೆ ಪೂರಕವಾಗಿತ್ತು.

ಕೀಚಕ ಪಾತ್ರದಲ್ಲಿ ನಾಗರಾಜ್ ರಾಜ್, ಭೀಮನಾಗಿ ಪವನ್ ಕುಮಾರ್, ಸುದೀಷ್ಣೆಯಾಗಿ ಅರ್ಚನಾ ಶ್ಯಾಮ್, ಸೈರಂದ್ರಿಯಾಗಿ ಭವಾನಿ, ಉತ್ತರೆಯಾಗಿ ಅಂಬಿಕಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದರು.

ರಂಗಭೂಮಿ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಹಾಗೂ ಕೂಚಿಪೂಡಿ ನೃತ್ಯಗಾರ್ತಿ ವಿದುಷಿ ವೀಣಾಮೂರ್ತಿ ವಿಜಯ್ ಅತಿಥಿಗಳಾಗಿ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.