ADVERTISEMENT

ಯೋಗ ಎಂದರೆ ಶಿಸ್ತು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST
ಯೋಗ ಎಂದರೆ ಶಿಸ್ತು
ಯೋಗ ಎಂದರೆ ಶಿಸ್ತು   

* ಸುಕೃತ ಎಸ್‌.

ನಿಮ್ಮ ಪ್ರಕಾರ ಅಂಗ ಸೌಷ್ಟವಕ್ಕೆ ಯೋಗದ ಕೊಡುಗೆ ಏನು?
ಮೊದಲು ನನಗೆ ಯೋಗದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಎಷ್ಟೊ ಜನ ಇದರ ಬಗೆಗೆ ಹೇಳಿದರೂ ನಾನು ಗಮನಕೊಟ್ಟಿರಲಿಲ್ಲ. ಆದರೆ, ಈಗ ನನಗೆ ಅರಿವಾಗಿದೆ. ಯೋಗ ದೇಹದ ಫಿಟ್‌ನೆಸ್‌ಗೆ ಮಾತ್ರ ಸಹಾಯಕ ಅಲ್ಲ. ಮನಸ್ಸಿನ ನೆಮ್ಮದಿಗೂ ಇದು ಮುಖ್ಯ. ಇತ್ತೀಚೆಗೆ ಪ್ರತಿಯೊಬ್ಬರದ್ದೂ ಒತ್ತಡದ ಬದುಕು. ಮನಸಿಗೆ ನೆಮ್ಮದಿ ಇಲ್ಲ. ಹೀಗಾಗಿ ಮಾನಸಿಕ ಆರೋಗ್ಯಕ್ಕಾಗಿ ಯೋಗದ ಮೊರೆ ಹೋಗುವುದು ಅನಿವಾರ್ಯವಾಗುತ್ತಿದೆ.

ಫಿಟ್‌ನೆಸ್‌ ಕಾಯ್ದುಕೊಳ್ಳಲು ಬೇರೆ ಬೇರೆ ವಿಧಾನಗಳಿವೆ. ಅವೆಲ್ಲದಕ್ಕಿಂತ ಯೋಗ ಹೇಗೆ ಭಿನ್ನ?
ಯೋಗ ಎಂದರೆ ಶಿಸ್ತು. ಇಲ್ಲಿ ಮನಸ್ಸು ಹಾಗೂ ದೇಹ ಎರಡರ ಸಮ್ಮಿಲನ ಮುಖ್ಯವಾಗುತ್ತದೆ. ಜಿಮ್‌ಗಳೂ ಇವೆ. ನಾನು ಒಂದು ಸಿನಿಮಾಕ್ಕಾಗಿ ಸಿಕ್ಸ್‌ ಪ್ಯಾಕ್‌ ಮಾಡಿಕೊಳ್ಳಬೇಕಾಯಿತು, ಮಾಡಿಕೊಂಡೆ. ಈ ರೀತಿಯ ಅನುಕೂಲಗಳು ಜಿಮ್‌ನಲ್ಲಿ ಇದೆ. ಆದರೆ, ಯೋಗ ಹಾಗಲ್ಲ. ಅದಕ್ಕೆ ಅದರದ್ದೇ ಆದ ರೀತಿ ನೀತಿ ಇದೆ. ವರ್ಷಾನುಗಟ್ಟಲೆಯ ಪರಿಶ್ರಮ ಇದಕ್ಕೆ ಬೇಕಾಗುತ್ತದೆ.

ADVERTISEMENT

ನಿಮ್ಮ ಫಿಟ್‌ನೆಸ್‌ ಗುಟ್ಟೇನು?
ದಿನಾ ಬೆಳಿಗ್ಗೆ ಒಂಬತ್ತು ಕಿ.ಮೀ. ನಡೆಯುತ್ತೇನೆ. ಆಮೇಲೆ ಊಟದಲ್ಲಿನ ನಿಯಂತ್ರಣ ನನ್ನ ಫಿಟ್‌ನೆಸ್‌ ಗುಟ್ಟು. ಜನರ ಮನಸ್ಸಿನಲ್ಲಿರಲು, ಚಿತ್ರರಂಗದಲ್ಲಿರಲು ಫಿಟ್‌ ಆಗಿರುವುದು ಬಹಳ ಮುಖ್ಯ. ಜಗತ್ತು ಬಹಳ ವೇಗವಾಗಿ ಹೋಗುತ್ತಿದೆ. ಸ್ವಲ್ಪ ಯಮಾರಿದರೂ ಸಾಕು, ನಿನ್ನ ಕಾಲ ಮುಗಿಯಿತು ಎನ್ನುವ ಮಾತು ಬರುತ್ತದೆ. ಆದ್ದರಿಂದ ಒಬ್ಬ ನಟ ಫಿಟ್‌ ಆಗಿರುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.