ADVERTISEMENT

ರಂಗಾರಂಗ್- ರಂಗೋಲಿ ಉತ್ಸವ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ಬೆಂಗಳೂರು ಗಣೇಶ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ವಿದ್ಯಾರಣ್ಯ ಯುವಕ ಸಂಘ 50ನೇ ಉತ್ಸವದ ಅಂಗವಾಗಿ ರಂಗಾರಂಗ್ ಹೆಸರಿನಲ್ಲಿ ರಂಗೋಲಿ ಉತ್ಸವವನ್ನು ಆಯೋಜಿಸಿದೆ.
 
ಇಷ್ಟು ವರ್ಷಗಳಲ್ಲಿ ಸಂಗೀತ, ನೃತ್ಯ ಏರ್ಪಡಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಸಂಘ ಈ ವರ್ಷ `ರಂಗಾರಂಗ್~ ಉತ್ಸವ ಆಚರಿಸುವ ಮೂಲಕ ಹಳೆಯ ಸಂಪ್ರದಾಯವನ್ನು ಮೆಲುಕು ಹಾಕುವ ಪ್ರಯತ್ನ ನಡೆಸಿದೆ.

ಇದರಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಎಲ್ಲ ಜಿಲ್ಲೆಗಳಿಂದ ಬಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳುತ್ತಿದ್ದು, ಬೆಂಗಳೂರು ಈ ಬಾರಿ ಇನ್ನಷ್ಟು ವರ್ಣರಂಜಿತವಾಗಲಿದೆ. ಮಲ್ಲೇಶ್ವರಂನಲ್ಲಿ ಮೊದಲ ಸುತ್ತು ಆಗಸ್ಟ್ 19ರಂದು ನಡೆಯಲಿದೆ.

ಇವರಲ್ಲಿ ಮೊದಲ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸೆಪ್ಟೆಂಬರ್ 2ರಂದು ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ ಪೈಪೋಟಿ ನಡೆಸುವರು. ಮೂವರು ವಿಜೇತರ ಹೆಸರುಗಳನ್ನು ಸೆಪ್ಟೆಂಬರ್ 27ರಂದು ಪ್ರಕಟಿಸಲಾಗುತ್ತದೆ.

ರಂಗೋಲಿಯ ವಿನ್ಯಾಸ, ವರ್ಣ ಮತ್ತು ಒಟ್ಟಾರೆ ಸೌಂದರ್ಯವನ್ನು ಗಮನಿಸಿ ತೀರ್ಪುಗಾರರ ತಂಡ ವಿಜೇತರನ್ನು ನಿರ್ಧರಿಸುತ್ತದೆ. ಮೊದಲ ಬಹುಮಾನ 100 ಗ್ರಾಂ ಚಿನ್ನ, ಎರಡನೇ ಬಹುಮಾನ 50 ಗ್ರಾಂ ಮತ್ತು ಮೂರನೇ ಬಹುಮಾನ 25 ಗ್ರಾಂ ಚಿನ್ನವನ್ನು ಒಳಗೊಂಡಿದೆ.

ರಂಗೋಲಿ ಸ್ಪರ್ಧೆಯು ಮಾರ್ಗೋಸಾ ರಸ್ತೆ ಮತ್ತು ಮಲ್ಲೇಶ್ವರ 8ನೇ ಕ್ರಾಸ್ ಬಳಿಯಿರುವ ಮಲ್ಲೇಶ್ವರ ಮೈದಾನದಲ್ಲಿ ಆರಂಭಿಕ ಸುತ್ತುಗಳೊಂದಿಗೆ ಆರಂಭವಾಗಲಿದೆ. ಆಗಸ್ಟ್ 19 ಬೆಳಿಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಸ್ಪರ್ಧೆ ನಡೆಯುತ್ತದೆ.

ರಂಗಾರಂಗ್ ಉತ್ಸವದಲ್ಲಿ ಭಾಗವಹಿಸುವವರು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಬೇಕಾದ ದಿನಾಂಕ ಆಗಸ್ಟ್ 11 ಮತ್ತು 12.

ಸ್ಥಳ: ಖಂಡಾಲ ಆಭರಣ ಮಳಿಗೆಗಳಿರುವ 11ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಡಿವಿಜಿ ರಸ್ತೆ, ಬಸವನಗುಡಿ, ಕಮರ್ಷಿಯಲ್ ಸ್ಟ್ರೀಟ್ ಮತ್ತು 8ನೇ ಕ್ರಾಸ್ ಸಂಪಿಗೆ ರಸ್ತೆ.
18 ವರ್ಷ ದಾಟಿದ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ: 93420 22070/ 95904 43016.

 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT