ADVERTISEMENT

ರಾಧಿಕಾ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಅನನ್ಯ ಕಲಾನಿಕೇತನ: ಶನಿವಾರ ರಾಧಿಕಾ ಸಂದೀಪ್ ಅವರ ಭರತನಾಟ್ಯ ರಂಗಪ್ರವೇಶ. ವೃತ್ತಿಯಲ್ಲಿ ವಕೀಲರಾದ ರಾಧಿಕಾ ಅವರು ವಿದುಷಿ ಕೆ. ಬೃಂದಾ ಅವರ ಬಳಿ 11 ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ತಮ್ಮ 14ನೇ ವಯಸ್ಸಿನಿಂದ ಕಲಿಕೆ ಆರಂಭಿಸಿದ ಅವರು ಈಗ ಪರಿಣತ ನೃತ್ಯ ಕಲಾವಿದೆಯಾಗಿ ರೂಪುಗೊಂಡಿದ್ದಾರೆ.

ಭರತನಾಟ್ಯದಲ್ಲಿ ಸೀನಿಯರ್ ಮುಗಿಸಿದ್ದು ಪ್ರಸ್ತುತ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಗುರು ಬೃಂದಾ ನೃತ್ಯ ಸಂಯೋಜಿಸಿದ ಶ್ರೀನಿವಾಸ ಕಲ್ಯಾಣ, ಮೋಹಿನಿ ಭಸ್ಮಾಸುರ, ಶಿವಶಕ್ತಿ, ಮಹಾದೇವಿ, ಗಂಗಾವತರಣ, ಶ್ರೀಕೃಷ್ಣ ಲೀಲಾ ಮುಂತಾದ ರೂಪಕಗಳಲ್ಲಿ ಅಭಿನಯಿಸಿದ್ದಾರೆ.

ರಾಧಿಕಾಳ ಗುರು ಬೃಂದಾ ಸಾಹಿತ್ಯ ಮತ್ತು ಕಲೆಯ ಕುಟುಂಬದಿಂದ ಬಂದವರು. ಗುರು ಡಾ. ತುಳಸಿ ರಾಮಚಂದ್ರ, ಬಿ. ಭಾನುಮತಿ, ನೀಲಾ ಜಯರಾಮನ್ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ದೇಶ, ವಿದೇಶಗಳ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ನಟುವಾಂಗ: ವಿದುಷಿ ಕೆ. ಬೃಂದಾ. ಹಾಡುಗಾರಿಕೆ: ರಾಜೇಶ್ವರಿ ಪಂಡಿತ್. ಮೃದಂಗ: ವಿದ್ವಾನ್ ವಿ.ಆರ್. ಚಂದ್ರಶೇಖರ್. ಕೊಳಲು: ವಿದ್ವಾನ್ ಎಚ್. ಎಸ್. ವೇಣುಗೋಪಾಲ್. ವಯಲಿನ್: ವಿದ್ವಾನ್ ಡಾ. ಎಂ. ನಟರಾಜ ಮೂರ್ತಿ. ರಿದಮ್ ಪ್ಯಾಡ್: ವಿದ್ವಾನ್ ಕಾರ್ತಿಕ್ ದಾತಾರ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.