ADVERTISEMENT

ರುದ್ರಾಕ್ಷಿ ಮೇಳ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

ರುದ್ರಾಕ್ಷಿ, ತಾಂಡವಪ್ರಿಯ ಶಿವನಿಗೆ ಅಚ್ಚುಮೆಚ್ಚು. ರುದ್ರಾಕ್ಷಿ ಧಾರಣೆ ಎಲ್ಲರಿಗೂ ಸಲ್ಲ ಎಂಬ `ಮಡಿ~ ಭಾವನೆ ಈಗ ಬದಲಾಗಿದೆ. ಈ ಕಾಯಿಯಲ್ಲೂ ವಿಶೇಷ ಶಕ್ತಿಯಿದೆ ಎಂಬ ಅಂಶ ಜಗಜ್ಜಾಹೀರಾಗುತ್ತಲೇ ಅದಕ್ಕೆ ಎಲ್ಲಾ ವರ್ಗದ ಜನರಿಂದಲೂ ಬೇಡಿಕೆ ಹೆಚ್ಚಿತು. ಅಸಲಿ ಲೇಬಲ್ ಹೊತ್ತ ನಕಲಿ ಕಾಯಿಗಳು ಫುಟ್‌ಪಾತ್‌ನಲ್ಲೂ ಬಿಕರಿಯಾಗುತ್ತಿವೆ.

ಆದರೆ ರುದ್ರಾಕ್ಷಿ ಮಾರಾಟಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಸಂಸ್ಥೆ `ರುದ್ರಶಕ್ತಿ~ ಮಾತ್ರ ಅಸಲಿ ರುದ್ರಾಕ್ಷಿಗಳನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಪ್ರತಿವರ್ಷ ಪ್ರದರ್ಶನ/ಮಾರಾಟ ಮೇಳವನ್ನು ಏರ್ಪಡಿಸುತ್ತಾ ಬಂದಿದೆ. ರುದ್ರಾಕ್ಷಿ ಧರಿಸಿ ಯಶಸ್ಸು, ಉದ್ಯೋಗದಲ್ಲಿ ಪ್ರಗತಿ, ಸಂಬಂಧಗಳಲ್ಲಿ ಸಾಮರಸ್ಯ, ಆರ್ಥಿಕ ಭದ್ರತೆ, ಶತ್ರುಗಳ ವಿರುದ್ಧ ಜಯ ಸಾಧಿಸುವ ಶಕ್ತಿಯನ್ನು ಸಂಚಯಗೊಳಿಸಿಕೊಳ್ಳಿ ಎಂದು ಹೇಳುತ್ತದೆ, `ರುದ್ರಶಕ್ತಿ~.
ಈ ವರ್ಷದ ಮೇಳ ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದ ಬಳಿಯಿರುವ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ನಲ್ಲಿ ಈಗಾಗಲೇ ಆರಂಭಗೊಂಡಿದ್ದು, ಇದೇ 21ರವರೆಗೂ ನಡೆಯಲಿದೆ.

ರುದ್ರಾಕ್ಷಿಯಲ್ಲಿ ಬಯೋ ಮ್ಯಾಗ್ನೆಟಿಕ್, ಪ್ಯಾರಾಮ್ಯೋಗ್ನೆಟಿಕ್ ಮತ್ತು ವಿದ್ಯುತ್ ಸಂಬಂಧಿ ಗುಣಗಳಿದ್ದು ಪ್ರತಿರೋಧ, ಧಾರಣೆ ಮತ್ತು ಪ್ರಚೋದನೆಯನ್ನು ಉಂಟುಮಾಡುತ್ತದೆ ಎನ್ನಲಾಗಿದೆ. ರುದ್ರಾಕ್ಷಿ ಮಣಿಗಳು ನಮ್ಮ ದೇಹದಲ್ಲಿನ ಜೈವಿಕ ವಿದ್ಯುತ್ತನ್ನು ನಿಯಂತ್ರಿಸುತ್ತವೆ ಎಂಬುದು `ರುದ್ರಶಕ್ತಿ~ಯ ಸುಮೀರ್ ಕಾಕೋಡ್ಕರ್ ಅಭಿಪ್ರಾಯ.
ರುದ್ರಾಕ್ಷಿಯಲ್ಲೇ ತಯಾರಿಸಿದ ಶಿವಲಿಂಗ ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.