ADVERTISEMENT

ರೇಸು... ರಂಗು

ಪ್ರಜಾವಾಣಿ ಚಿತ್ರ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಖುರಪುಟದ ಸದ್ದು. ಅಂಗೈ ಅಗಲ ಮೀರಿದ ಮೊಬೈಲ್‌ಗಳ ಹಿಡಿದವರಿಂದ ಸಂದೇಶಗಳ ವಿನಿಮಯ. ಗೆಲ್ಲುವ ಕುದುರೆಗಳ ಕುರಿತ ಲೆಕ್ಕಾಚಾರ. ಗಂಧವತಿಯರ ಪರಿಮಳ ತೀಡುವ ಗಾಳಿಯ ಸಂಕೀರ್ಣ ಗಮಲು.

ಸೂಟು-ಬೂಟು ಧರಿಸಿದವರ ಠಾಕುಠೀಕು ನಡೆ. ವಯ್ಯಾರಿಯರಿಗಂತೂ ಕೊರತೆ ಇಲ್ಲ. ಕ್ಯಾಮೆರಾ ಕಣ್ಣುಗಳು ಅಳೆದಷ್ಟೂ ಕಂತದ ಬಣ್ಣ. ತಂಪು ಹವೆಯಲ್ಲೂ ತಣ್ಣಗಿನ ಬಿಯರ್ ಹೀರುವ ತುಟಿಗಳು. ಸೆಲೆಬ್ರಿಟಿಗಳು, ನಟ-ನಟಿಯರು, ಮಾಡೆಲ್‌ಗಳು, ಉದ್ಯಮಿಗಳು... ಅಬ್ಬಾ ಎಂತೆಂಥ ಜನ! ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಭಾನುವಾರ (ಜು.14) ನಡೆದ ಕಿಂಗ್‌ಫಿಷರ್ ಡರ್ಬಿ ರೇಸ್‌ನ ಸಂದರ್ಭದಲ್ಲಿ ಕಂಡ ಮುಖಗಳಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.