ADVERTISEMENT

ರೈಲ್ವೆ ನಿಲ್ದಾಣದಲ್ಲಿ ಬ್ಲೂಫೈ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST
ರೈಲ್ವೆ ನಿಲ್ದಾಣದಲ್ಲಿ ಬ್ಲೂಫೈ
ರೈಲ್ವೆ ನಿಲ್ದಾಣದಲ್ಲಿ ಬ್ಲೂಫೈ   

ಬೆಂಗಳೂರು ರೈಲ್ವೆ ನಿಲ್ದಾಣದ ಆವರಣದಲ್ಲಿ ನಿಂತು ನಿಮ್ಮ ಮೊಬೈಲ್‌ನ ಬ್ಲೂಟೂಥ್ ಆನ್ ಮಾಡಿದರೆ ಸಾಕು, ರೈಲ್ವೆ ಮಾಹಿತಿ ಪಟ್ಟಿ ನಿಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಸಿನಿಮಾ ಹಾಡು, ವಿಡಿಯೊ, ಗೇಮ್, ವಾಲ್‌ಪೇಪರ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳವ ಅನುಕೂಲವೂ ದೊರಕುತ್ತದೆ. ಇಂಥ ವ್ಯವಸ್ಥೆ ದೊರಕುತ್ತಿರುವುದು ಭಾರತದಲ್ಲಿಯೇ ಮೊದಲ ಬಾರಿಗೆ ಎನ್ನುತ್ತಾರೆ ಟೆಲಿಬ್ರಹ್ಮ ಸಂಸ್ಥೆಯ ರವಿ.

ರೈಲ್‌ಟೆಲ್ ಮತ್ತು ಟೆಲಿಬ್ರಹ್ಮ ಸಂಸ್ಥೆಗಳು ಒಟ್ಟಾಗಿ ದಕ್ಷಿಣ ರೈಲ್ವೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನುಕೂಲವೇ ಈ ಬ್ಲೂಫೈ ವ್ಯವಸ್ಥೆಯ ಆರಂಭ. ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಸೇವೆ ಆರಂಭಿಸಲಾಗಿದೆ. ರೈಲ್ವೆ ನಿಲ್ದಾಣದ ಯಾವುದೇ ಪ್ಲಾಟ್‌ಫಾರಂನಲ್ಲಿ ನಿಂತು ಮೊಬೈಲ್‌ನ ಬ್ಲೂಟೂಥ್ ಅಥವಾ ವಿ-ಫಿ ಸಂಪರ್ಕವನ್ನು ಆನ್ ಮಾಡಿದರೆ ಸಾಕು ಮಾಹಿತಿಯ ಮಹಾಪೂರವನ್ನೇ ಪಡೆಯಬಹುದು. ಅದರಲ್ಲಿ ಕ್ರಿಕೆಟ್ ಮಾಹಿತಿಯೂ ಸೇರಿದೆ. ಅಂದಹಾಗೆ ಈ ಎಲ್ಲಾ  ಸೇವೆಗಳು ಉಚಿತವಾಗಿ ದೊರಕುತ್ತಿರುವುದು ವಿಶೇಷ.

ರೈಲ್‌ಟೆಲ್ ಸಂಸ್ಥೆಯ ಮನೋಹರ್ ರಾಜ್ ಅವರು ತಮ್ಮ ಸಂಸ್ಥೆಯ ರೈಲ್‌ವೈರ್ ಬ್ರಾಡ್‌ಬ್ಯಾಂಡ್ ಮೂಲಕ ಉತ್ತಮ ಗುಣಮಟ್ಟದ ಇಂಟರ್‌ನೆಟ್ ಸಂಪರ್ಕ ಸೇವೆಯನ್ನು ಬೆಂಗಳೂರು ರೈಲ್ವೆ ನಿಲ್ದಾಣದ ಪ್ರಯಾಣಿಕರಿಗೆ ಒದಗಿಸುವುದಾಗಿ ಹೇಳಿದರು.

ADVERTISEMENT

ಐಟಿ ನಗರ ಎನಿಸಿಕೊಂಡ ಬೆಂಗಳೂರಿನಲ್ಲಿಯೇ ಇಂಥ ವ್ಯವಸ್ಥೆಯನ್ನು ಮೊದಲಬಾರಿಗೆ ಪರಿಚಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದವರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎಸ್.ಮಣಿ. 

ಈ ವ್ಯವಸ್ಥೆ ಮುಖಾಂತರ ಇಂಟರ್‌ನೆಟ್‌ಗೂ ಕೂಡ ಸಂಪರ್ಕ ಸಾಧಿಸಿ ಗುಣಮಟ್ಟದ ಸೇವೆ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.