ಮೊಹಮ್ಮದ್ ರಫಿ ಎಂದೂ ಮರೆಯಲಾಗದ ಹಿಂದಿ ಗಾಯಕ. 60, 70ರ ದಶಕದಲ್ಲಿ ಅವರು ಹಾಡಿದ ಗೀತೆಗಳು ಅಜರಾಮರ. ಎಲ್ಲವೂ ಅಷ್ಟೇ ಸುಮಧುರ. ಅಮೆರಿಕ ನಿವಾಸಿ, ಹೆಸರಾಂತ ಟ್ರ್ಯಾಕ್ ಸಿಂಗರ್ ಲಕ್ಷ್ಮಣ್ ಶ್ರೀರಾಮ್ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಇತ್ತೀಚೆಗೆ ಮೊಹಮ್ಮದ್ ರಫಿ ಹಾಡಿರುವ ಹಳೆಯ ಹಿಂದಿ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು.
ಶಂಕರ್ -ಜೈಕಿಶನ್ ಸಂಗೀತ ಸಂಯೋಜಿಸಿರುವ ಶಮ್ಮಿ ಕಪೂರ್ ಅಭಿನಯದ ಚಿತ್ರಗೀತೆಗಳನ್ನೇ ಅವರು ಹೆಚ್ಚಾಗಿ ಆಯ್ದುಕೊಂಡಿದ್ದರು. ಅವರಿಗೆ ಗಾಯಕಿ ರೋಹಿಣಿ ಸಾಥ್ ನೀಡಿದರು. ‘ಬದನ್ ಪೆ ಸಿತಾರೆ’, ‘ತುಮ್ ಸೆ ಅಚ್ಚಾ ಕೌನ್ ಹೇ’, ‘ಚಾಹೆ ಕೋಯಿ ಮುಝೇ ಜಂಗ್ಲಿ ಕಹೆ’, ‘ಆಸಮಾನ್ ಸೆ ಆಯಾ ಫರಿಶ್ತಾ’, ‘ಇಸ್ ರಂಗ್ ಬದಲ್ತಿ ದುನಿಯಾ ಮೇ’... ಹೀಗೆ ರಫಿ ಸಂಜೆ ಎಲ್ಲರ ಮನಸ್ಸು ತುಂಬಿತ್ತು. ಪ್ರತಿಯೊಂದು ಹಾಡಿನ ನಂತರ ಕಲಾಭಿಮಾನಿಗಳ ಕರತಾಡನ, ಶಿಳ್ಳೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ವಿ.ಕೆ. ಮೂರ್ತಿ ಮತ್ತು ಇಂಟರ್‌ನ್ಯಾಷನಲ್ ಹ್ಯೂಮರ್ ಕ್ಲಬ್‌ನ ಅಧ್ಯಕ್ಷ ವೈ. ಎಂ.ಎನ್. ಮೂರ್ತಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.