ADVERTISEMENT

‘ಲಿಪ್‌ಸ್ಟಿಕ್‌’ಗೆ ದೊಡ್ಡ ರಿಲೀಫ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
‘ಲಿಪ್‌ಸ್ಟಿಕ್‌’ಗೆ ದೊಡ್ಡ ರಿಲೀಫ್‌
‘ಲಿಪ್‌ಸ್ಟಿಕ್‌’ಗೆ ದೊಡ್ಡ ರಿಲೀಫ್‌   

ಪ್ರಕಾಶ್ ಝಾ ನಿರ್ದೇಶನದ ‘ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ’ ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಅಂತಿಮಗೊಂಡಿದೆ. ‘ಎ’ ಪ್ರಮಾಣಪತ್ರದೊಂದಿಗೆ ಜುಲೈ 28ರಂದು ಚಿತ್ರ ತೆರೆಕಾಣಲಿದೆ.

ಅಲಂಕೃತ ಶ್ರೀವಾಸ್ತವ್, ಕೊಂಕಣಾ ಸೇನ್ ಶರ್ಮಾ, ರತ್ನ ಪ್ರಕಾಶ್ ಷಾ, ಅಹನ ಕುಮಾರ್ ಮತ್ತು ಪ್ಲಬಿತ ಬ್ರೊಥಾಕುರ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಸಣ್ಣ ಪಟ್ಟಣವೊಂದರಲ್ಲಿ ವಾಸಿಸುವ 18ರಿಂದ 55 ವರ್ಷ ವಯೋಮಿತಿಯ ನಾಲ್ವರು ಮಹಿಳೆಯರ ಕಥೆ ಚಿತ್ರದ ಹೂರಣ.

ಬುರ್ಖಾ ತೊಟ್ಟು ಕಾಲೇಜಿಗೆ ಹೋಗುವ ಯುವತಿ, ಯುವ ಬ್ಯೂಟೀಶಿಯನ್, ಮೂರು ಮಕ್ಕಳ ತಾಯಿ ಮತ್ತು ವಯಸ್ಸಾದ ವಿಧವೆಯರ ತೊಳಲಾಟವನ್ನು ಚಿತ್ರ ಬಿಂಬಿಸಲಿದೆ. ಇವರ ವೈಯಕ್ತಿಕ ಬದುಕು, ಹಕ್ಕುಗಳು ಮತ್ತು ಲೈಂಗಿಕ ಸ್ವಾತಂತ್ರ್ಯವನ್ನು ಚಿತ್ರ ಪ್ರತಿಪಾದಿಸುತ್ತದೆ.

ADVERTISEMENT

ಚಿತ್ರದ ಹಂಚಿಕೆಯ ಹಕ್ಕನ್ನು ನಿರ್ಮಾಪಕಿ ಏಕ್ತಾ ಕಪೂರ್ ಪಡೆದುಕೊಂಡಿದ್ದಾರೆ, ಅಷ್ಟೇ ಅಲ್ಲ ಸಾಕಷ್ಟು ಬಂಡವಾಳವನ್ನೂ ತೊಡಗಿಸಿದ್ದಾರೆ. ನಿರ್ದೇಶಕ ಝಾ ಅವರು ಒಮ್ಮೆ ಏಕ್ತಾ ಕಪೂರ್ ಅವರನ್ನು ಚಿತ್ರ ವೀಕ್ಷಿಸಲು ಆಹ್ವಾನಿಸಿದ್ದರು. ಸಿನಿಮಾ ನೋಡಿ ಪ್ರಭಾವಿತರಾದ ಏಕ್ತಾ ಕಪೂರ್, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೊಗಳುವುದರ ಜೊತೆಗೆ ಪ್ರಚಾರ ಮತ್ತು ಹಂಚಿಕೆಯ ಹೊಣೆ ಹೊರುವ ಭರವಸೆ ನೀಡಿದರು.

‘ಪುರುಷ ಪ್ರಧಾನ ಸಮಾಜಕ್ಕೆ ಮಹಿಳಾ ಸಂವೇದನೆಯನ್ನು ಮನಗಾಣಿಸಲು ಇಂಥ ಚಿತ್ರಗಳು ಬೇಕು’ ಎಂಬುದು ಏಕ್ತಾ ಮಾತು. ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ ಮಹಿಳೆಯನ್ನು ಬಿಂಬಿಸಿರುವ ರೀತಿ ಮತ್ತು ಕಥೆಯ ಬಗ್ಗೆ ತಕರಾರು ಎತ್ತಿತ್ತು. ಚಿತ್ರವು ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಆಕ್ಷೇಪಿಸಿತ್ತು.

ಇದನ್ನು ಪ್ರಶ್ನಿಸಿ ಝಾ ಮತ್ತು ಶ್ರೀವಾಸ್ತವ್ ಟ್ರಿಬ್ಯುನಲ್ ಮೊರೆ ಹೋಗಿದ್ದರು. ಚಿತ್ರ ವೀಕ್ಷಿಸಿದ ದೆಹಲಿ ಲೋಕಾಯುಕ್ತ ನ್ಯಾಯಮೂರ್ತಿ ಮನಮೋಹನ್ ಸರಿನ್ ನೇತೃತ್ವದ ಸಮಿತಿ, ‘ಎ’ ಪ್ರಮಾಣ ಪತ್ರದೊಂದಿಗೆ ಚಿತ್ರ ಬಿಡುಗಡೆಗೆ ಒಪ್ಪಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.