ADVERTISEMENT

ವಯಸ್ಸಿಗೆ ಸಿಕ್ಕ ಬೆಲೆ

ಬಸ್ ಕತೆ

ಕೋ.ಲ.ರಂಗನಾಥ್
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ಬಿ.ಎಂ.ಟಿ.ಸಿ. ಬಸ್‌ನಲ್ಲಿ ನಾನು ಸಾಮಾನ್ಯವಾಗಿ ಕುಳಿತೇ ಪ್ರಯಣ ಮಾಡುತ್ತೇನೆ. ಕಾರಣ ನಾನು ಪ್ರಾರಂಭದ ನಿಲ್ದಾಣದಿಂದಲೇ ಬಸ್ ಹತ್ತುತ್ತೇನೆ. ಮಧ್ಯದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವುದು ಅಪರೂಪ.

ರಾತ್ರಿ 8 ಗಂಟೆ. ರಾಮಕೃಷ್ಣ ಆಶ್ರಮದ ನಿಲ್ದಾಣದ ಹತ್ತಿರ ಬಸ್‌ಗಾಗಿ ಕಾದು ನಿಂತಿದ್ದೆ. ಬಸ್ ಬಂದಿತು. ಆದರೆ ಬಸ್ ತುಂಬಿ ತುಳುಕುತ್ತಿತ್ತು. ಫುಟ್‌ಬೋರ್ಡ್ ಮೇಲೂ ಪ್ರಯಾಣಿಕರಿದ್ದರು.

ಡ್ರೈವರ್, ಕಂಡಕ್ಟರ್ ಇಬ್ಬರೂ ಪರಿಚಯ ಇದ್ದುದರಿಂದ ಮುಂದಿನ ಬಾಗಿಲಿನಿಂದ ಅಂದರೆ ಡ್ರೈವರ್ ಸೀಟ್ ಕಡೆ ಬಸ್ ಹತ್ತಿದೆ. ಅಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇತ್ತು.

ಅವರನ್ನು ದಾಟಿಕೊಂಡು ಹೋಗುವುದು ಬಹಳ ಕಷ್ಟವಾಯಿತು. ನಿಧಾನವಾಗಿ ಚಲಿಸುತ್ತಿದ್ದಾಗ ಒಬ್ಬ ಮಹಿಳೆ ಸಿಡಿಮಿಡಿಗೊಂಡು, ಬೇಸರದಿಂದ `ಹೋಗ್ರಿ, ಹೋಗ್ರಿ' ಎಂದು ಹೇಳಿ ಕಂಡಕ್ಟರ್ ಕಡೆ ತಿರುಗಿ `ನೋಡಿ ನೋಡಿ' ಇವರು ಎಂದು ನನ್ನನ್ನು ತೋರಿಸಿದರು.

ಆಗ ಕಂಡಕ್ಟರ್ `ವಯಸ್ಸಿಗೆ ಬೆಲೆ ಕೊಡಬೇಕು' ಎಂದು ನನ್ನ ಪರವಾಗಿ ಮಾತನಾಡಿದರು. ನಾನು ಜಾಗ ಮಾಡಿಕೊಂಡು ಬಸ್‌ನ ಹಿಂಭಾಗ ಸೇರಿಕೊಂಡೆ. ಆಗ ಕಂಡಕ್ಟರ್ ನನ್ನ ಬಳಿ ಬಂದು ನನಗೆ ಸೀಟು ಮಾಡಿಕೊಟ್ಟರು.

ಕಂಡಕ್ಟರ್ ನನ್ನ ಬಗ್ಗೆ ತೋರಿದ ಕಾಳಜಿ, ಕಳಕಳಿ ವಿಶ್ವಾಸ ಕಂಡು ನನಗೆ ಬಹಳ ಸಂತೋಷವಾಯಿತು. ಸಹೃದಯರಾದ ಕಂಡಕ್ಟರ್‌ಗೆ ವಂದನೆ ಹೇಳಿದೆ.
          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.