ADVERTISEMENT

ವೃತ್ತಿಪರತೆಯ ಅಗತ್ಯವಿದೆ

ಪ್ರಜಾವಾಣಿ ವಿಶೇಷ
Published 22 ಜನವರಿ 2016, 19:47 IST
Last Updated 22 ಜನವರಿ 2016, 19:47 IST
ವೃತ್ತಿಪರತೆಯ ಅಗತ್ಯವಿದೆ
ವೃತ್ತಿಪರತೆಯ ಅಗತ್ಯವಿದೆ   

ಎಂಟನೇ ‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ ಕುರಿತು  ನಿರ್ದೇಶಕ ಬಿ.ಎಂ. ಗಿರಿರಾಜ್ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾಗಳನ್ನು ಬೇರೆ ಬೇರೆ ಕೋನದಿಂದ ನೋಡಲು, ಅರ್ಥೈಸಿಕೊಳ್ಳಲು ಚಿತ್ರೋತ್ಸವ ಸಹಕಾರಿ. ಚಿತ್ರೋತ್ಸವಕ್ಕೆ ಹೆಚ್ಚು ಹೆಚ್ಚು ಜನ ಬರುತ್ತಿದ್ದಾರೆ. ಅಂದರೆ ಸಮಾನ ಮನಸ್ಕರು ಒಂದೆಡೆ ಸೇರುತ್ತಾರೆ. 

ಇವರೆಲ್ಲ ಸಿನಿಮಾ ನೋಡಿ ಹೊರಬಂದಾಗ ಅಲ್ಲಿ ನಡೆಯುವ ಚರ್ಚೆಗಳಿಂದಾಗಿಯೇ ಒಂದು ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತದೆ. ಬೇರೆ ಬೇರೆ ದೇಶಗಳಿಂದ ಬರುವ ನಿರ್ದೇಶಕರು, ತಂತ್ರಜ್ಞರ ಜೊತೆ ಚರ್ಚಿಸುವಾಗ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪರಿಸರ, ಸಮಸ್ಯೆಗಳ ಬಗ್ಗೆ ಅರಿಯುತ್ತೇವೆ. ಆ ವಿಚಾರದಲ್ಲಿ ಹೇಳುವುದಾದರೆ ನಮ್ಮಂಥ ಚಿತ್ರಕರ್ಮಿಗಳಿಗೆ ಎಲ್ಲಾ ಕಡೆಯೂ ಸಮಸ್ಯೆ ಇದ್ದಿದ್ದೇ.

ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಸಿನಿಮಾಗಳ ಆಯ್ಕೆ ವಿಚಾರಕ್ಕೆ ಬಂದರೆ ಹತ್ತು ಸಿನಿಮಾಗಳಲ್ಲಿ ಮೂರು ವಾಹ್ ಎನ್ನುವಂತಿರುತ್ತದೆ. ಆ ಆಯ್ಕೆ ಯಾವ ಆಯಾಮದಲ್ಲಿ ನಡೆದಿದೆ ಎಂಬ ತಿಳಿವಳಿಕೆ ಪ್ರೇಕ್ಷಕರಿಗಿರುವುದಿಲ್ಲ. ಉದಾಹರಣೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಥೀಮ್ ಇಟ್ಟುಕೊಂಡರೆ ಪ್ರದರ್ಶನಕ್ಕಾಗಿ ಸಿನಿಮಾ ಆಯ್ಕೆ ಮಾಡುವಾಗ ಒಂದಷ್ಟು ಚರ್ಚೆಗಳು ನಡೆದಿರುತ್ತವೆ. ಪ್ರತಿ ಚಿತ್ರಕ್ಕೂ ಅದರದ್ದೇ ಆದ ಸಾಮಾಜಿಕ ಮಿತಿಯಿರುತ್ತದೆ. ಹಾಗಾಗಿ ಯಾವ ಸಿನಿಮಾವನ್ನು ಯಾಕೆ ಆಯ್ಕೆ ಮಾಡಿದ್ದೇವೆ ಎಂಬ ಸಣ್ಣ ವಿವರಣೆ ನೀಡಿದರೆ ನೋಡುವವರಿಗೆ ಅನುಕೂಲ.

ಚಿತ್ರೋತ್ಸವದ ಆಯೋಜನೆಯಲ್ಲಿ ವೃತ್ತಿಪರತೆಯೂ ಅಗತ್ಯವಿದೆ. ಸರ್ಕಾರದ ಯಾವ ಕೆಲಸಕ್ಕಾದರೂ ತಕ್ಷಣಕ್ಕೆ ಹಣ ಬಿಡುಗಡೆ ಆಗುವುದಿಲ್ಲ. ಅದರಿಂದಾಗಿ ಆಯೋಜಕರು, ಸ್ವಯಂ ಸೇವಕರು ಒದ್ದಾಡಬೇಕಾಗುತ್ತದೆ. ಹಣ ಬಿಡುಗಡೆಗೆ ಸ್ವಲ್ಪ ಚುರುಕುತನ ತೋರಿದರೆ ಆಯೋಜನೆ ಇನ್ನೂ ಚೆನ್ನಾಗಿರುವ ನಿರೀಕ್ಷೆ ಇದೆ. ಊಟದ್ದೂ ಒಂದು ಸಮಸ್ಯೆಯೇ. ಏಕೆಂದರೆ ಮಾಲ್‌ಗಳಲ್ಲಿ ಅಥವಾ ಅಕ್ಕಪಕ್ಕದ ಹೋಟೆಲ್‌ಗಳಲ್ಲಿ ಊಟ ಮಾಡಬೇಕೆಂದರೆ ದುಬಾರಿ ವೆಚ್ಚ ತೆರಬೇಕು. ಹಾಗಾಗಿ ಆಯೋಜಕರೇ ಕಡಿಮೆ ವೆಚ್ಚದಲ್ಲಿ ಊಟದ ವ್ಯವಸ್ಥೆ ಬಗ್ಗೆ ಗಮನಹರಿಸಿದರೆ ಅನುಕೂಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.