ಚೈತ್ರ ಮಾಸ ಬಂತೆಂದರೆ ಎಲ್ಲೆಲ್ಲೂ ವಸಂತ ಗಾನ. ರಾಮೋತ್ಸವದ ನಾದಗಾಳಿ. ಕೆಲವು ಶಾಶ್ವತ ರಾಮಮಂದಿರಗಳಾದರೆ, ಇನ್ನು ಕೆಲವು ತಾತ್ಕಾಲಿಕ ಚಪ್ಪರದ ಮಂಡಳಿಗಳು! ಹಲವು ಮಂಡಳಿಗಳು ರಾಮನವಮಿಯಿಂದ (ಏ.1) ರಾಮೋತ್ಸವ ಪ್ರಾರಂಭಿಸಿದರೆ ಕೆಲವು ರಾಮ ಮಂದಿರಗಳು ಹಳೆ ಸಂಪ್ರದಾಯದಂತೆ ಯುಗಾದಿಯಿಂದ (ಏ. 23)ಲೇ ಪ್ರಾರಂಭಿಸುತ್ತವೆ.
ಇದಕ್ಕೆ ಗರ್ಭನವಮಿ ಎಂದು ಕರೆಯುತ್ತಾರೆ. ಗರ್ಭನವಮಿ ಆಚರಿಸುವ ಸಂಸ್ಥೆಗಳಲ್ಲಿ ವೈಯಾಲಿಕಾವಲ್ ರಾಮ ದೇವಸ್ಥಾನವೂ ಒಂದು.
ವೈಯಾಲಿಕಾವಲ್ ಎಕ್ಸ್‌ಟೆನ್‌ಷನ್ ಅಸೋಸಿಯೇಷನ್ 1956ರಲ್ಲಿ ಪ್ರಾರಂಭವಾಯಿತು. ಸಂಸ್ಥೆಯ ಕಾರ್ಯಕರ್ತರು ಪ್ರತಿ ಶನಿವಾರ ಸೇರಿ ರಾಮ ಭಜನೆ ಮಾಡುತ್ತಿದ್ದರು. ರಾಮ ದೇವಾಲಯ ಕಟ್ಟಲು ಈ ಭಜನೆಯೇ ಪ್ರೇರಣೆ.
ಶ್ರೀರಾಮ ಮಂದಿರದಲ್ಲಿ ಸೀತಾ, ಲಕ್ಷ್ಮಣ, ಆಂಜನೇಯ ಸಹಿತ ಶ್ರೀರಾಮಚಂದ್ರ ಸ್ವಾಮಿಯ ಸುಂದರ ವಿಗ್ರಹಗಳು ಪ್ರತಿಷ್ಠಾಪನೆಗೊಡವು. ಜೊತೆಗೆ ಮಹಾಗಣಪತಿ, ಶಾರದಾಂಬೆ, ನವಗ್ರಹಗಳೂ ಪ್ರತಿಷ್ಠಾಪನೆಗೊಂಡವು.
ಈ ವರ್ಷದ ರಾಮೋತ್ಸವ ಯುಗಾದಿಯಿಂದ ಏ. 5ರವರೆಗೆ ನಡೆಯಲಿದೆ. ಈಗ ಡಾ. ಕೆ.ಆರ್.ಎಸ್. ಶಂಕರ್ ಅಧ್ಯಕ್ಷತೆಯಲ್ಲಿಸಮಿತಿಯು ಯಶಸ್ವಿಯಾಗಿ ನಡೆಸುತ್ತಿದೆ.
ಪ್ರತಿ ದಿನ ಬೆಳಿಗ್ಗೆ ಸೂರ್ಯ ನಮಸ್ಕಾರ, ನವಗ್ರಹ ಜಪ, ಸುಂದರ ಕಾಂಡ ಪಾರಾಯಣ ನಡೆಯುವುದು. ಪ್ರತಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ವರ್ಷ ಗಾಯನವಲ್ಲದೆ ವೀಣೆ, ಘಟ ತರಂಗ್ (ಲಯ, ರಾಗ ಸಮರ್ಪಣೆ), ಭಜನೆ, ಸುಗಮ ಸಂಗೀತ ಕಛೇರಿಗಳನ್ನು ಏರ್ಪಡಿಸಲಾಗಿದೆ.
ಮಾ. 23ರಂದು ಶ್ರೀರಾಮ ಪಟ್ಟಾಭಿಷೇಕ ಹಾಗೂ ಸಂಜೆ ಬಡಾವಣೆಯ ಮುಖ್ಯ ಬೀದಿಗಳಲ್ಲಿ ರಥೋತ್ಸವ, 2ರಂದು ಹನುಮಂತೋತ್ಸವ ಮತ್ತು ಅನ್ನದಾನ, 3ರಂದು ಶಯನೋತ್ಸವ, 4ರಂದು ವಿಶ್ವರೂಪ ದರ್ಶನ ಹಾಗೂ 5ರಂದು ವಸಂತೋತ್ಸವ ಜರುಗುವುದು.
ಶುಕ್ರವಾರ (ಮಾ.23) ಬೆಳಗ್ಗೆ ಸುಂದರಕಾಂಡ ಪಾರಾಯಣ ಹಾಗೂ ಯುಗಾದಿ ಪಂಚಾಂಗ ಶ್ರವಣ. ಸಂಜೆ 7-00ಕ್ಕೆ ಸ್ತ್ರೀ ತಾಳ್ ತರಂಗ್ ತಂಡದಿಂದ ಲಯ, ರಾಗ ಸಮರ್ಪಣೆ ; ಸುಕನ್ಯಾ ರಾಮಗೋಪಾಲ್ ಘಟ ಮತ್ತು ಕೊನಕೋಲ್. ಜೆ. ಯೋಗವಂದನ ವೀಣೆ, ಸೌಮ್ಯ ರಾಮಚಂದ್ರನ್ - ಪಿಟೀಲು, ರಂಜನಿ ವೆಂಕಟೇಶ್ ಮದಂಗ ಮತ್ತು ಭಾಗ್ಯಲಕ್ಷ್ಮೀ ಎಂ. ಕಷ್ಣ ಮೋರ್ಚಿಂಗ್. ಶ್ರೀರಾಮರ ದೇವಸ್ಥಾನ, 9ನೇ ಮೈನ್, ವೈಯಾಳಿಕಾವಲ್, ಮಲ್ಲೇಶ್ವರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.