ADVERTISEMENT

ಶಾಲೆಯಲ್ಲಿಹಸಿರು ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ದೇಶದ ಮೊದಲ ಹಸಿರು ಶಾಲೆ ಎಂಬ ಅಗ್ಗಳಿಕೆ ಹೊಂದಿರುವ ಕ್ಯಾಂಡರ್ ಅಂತರರಾಷ್ಟ್ರೀಯ ಶಾಲೆ ಈಚೆಗೆ ತನ್ನ 2ನೇ ಕ್ರೀಡಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿತು.

ಕ್ರೀಡಾ ದಿನಾಚರಣೆಯಂದು ಪೋಷಕರೆಲ್ಲರೂ ಸೇರಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ಹಸಿರು ಅಭಿಯಾನಕ್ಕೆ ತಮ್ಮ ಬೆಂಬಲದ ರುಜು ಹಾಕಿದರು.  ದಿನಾಚರಣೆಯ ಭಾಗವಾಗಿ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 

ಏರೋಬಿಕ್ಸ್, ಯೋಗ ಮತ್ತಿತರ ಮನರಂಜನಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪೋಷಕರು ಸಂತಸದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪದಕ ಹಾಗೂ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ADVERTISEMENT

`ಎಲ್ಲರೂ ಚಿಕ್ಕ ವಯಸ್ಸಿನಿಂದಲೇ ದೇಹ ಹಾಗೂ ಮನಸ್ಸುಗಳ ಆರೋಗ್ಯಪೂರ್ಣ ಬೆಳವಣಿಗೆಯತ್ತ ಗಮನಹರಿಸಬೇಕು. ದೇಹ ಆರೋಗ್ಯವಾಗಿರಲು ಉತ್ತಮ ಆಹಾರ ಹಾಗೂ ವ್ಯಾಯಾಮ ಅಗತ್ಯ.

ಮಕ್ಕಳು ಪ್ರೌಢಶಾಲೆಗೆ ಸೇರುವ ವೇಳೆಗೆ ದೀರ್ಘಾವಧಿ ವ್ಯಾಯಾಮ ಮಾಡುವುದು ಅಗತ್ಯ' ಎಂದರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಮ್ಯಾರಥಾನ್ ಪಟು ಗುಲ್ ಮೊಹಮ್ಮದ್ ಅಕ್ಬರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.