ADVERTISEMENT

ಸಂಕ್ರಾಂತಿ ಸಂಭ್ರಮದಲ್ಲಿ ನೃತ್ಯ ನಿನಾದ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಸುಚಿತ್ರ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಇದೇ ಬುಧವಾರದಿಂದ ಭಾನುವಾರದ (ಜ.11ರಿಂದ 15)ವರೆಗೆ `ಸಂಕ್ರಾಂತಿ ಸಂಭ್ರಮ~ವೆಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ.

ಪ್ರತಿ ಶನಿವಾರ ಸಾಹಿತ್ಯ ಸಂಜೆ, ಭಾನುವಾರದಂದು ಸಾಹಿತ್ಯ ಚಿಂತನೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಅಕಾಡೆಮಿಯು ವಿಭಿನ್ನ ನೆಲೆಗಟ್ಟಿನಲ್ಲಿ ಯೋಚಿಸುತ್ತಿದೆ. ಅದರ ಅಂಗವಾಗಿಯೇ `ಸಂಕ್ರಾಂತಿ ಸಂಭ್ರಮ~ ಹಮ್ಮಿಕೊಂಡಿದೆ.

ಬುಧವಾರ ನೃತ್ಯ ಕಲಾವಿದೆ ವೈಜಯಂತಿಕಾಶಿ ಅವರಿಂದ ಕೂಚಿಪುಡಿ ನೃತ್ಯ ಪ್ರದರ್ಶನ. ಅತಿಥಿ: ಡಾ.ನಾಗಮಣಿ ಶ್ರೀನಾಥ್. ಗುರುವಾರ ಗಣೇಶ ದೇಸಾಯಿ ಮತ್ತು ಸಾ-ಮುದ್ರ ಸಂಸ್ಥೆಯ ಭಾರತೀ ಸಿಂಗ್ ತಂಡದಿಂದ `ಗೋಪಿಕೋನ್ಮಾದ~ ನೃತ್ಯ ನಾಟಕ (ರೂಪಾಂತರ: ಪ್ರೊ.ಕೆ.ಈ. ರಾಧಾಕೃಷ್ಣ). ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗುರು ಭಾನುಮತಿ ಅವರು ನೃತ್ಯಕ್ಕೆ ರೂಪಿಸಿದ್ದಾರೆ.


ಇದು ಭರತನಾಟ್ಯದ ಚೌಕಟ್ಟಿನೊಳಗೆ ಒಡಿಸ್ಸಿ, ಕಥಕ್, ಅಲ್ಲದೇ ಕರ್ನಾಟಕದ ಮೂಲ ಕಲೆ ತೆಂಕು ಮತ್ತು ಬಡಗು ಯಕ್ಷಗಾನ ನೃತ್ಯ ಪ್ರಕಾರಗಳನ್ನೊಳಗೊಂಡ ಒಂದು ವಿಶಿಷ್ಟ ಪ್ರಯೋಗ. ಅತಿಥಿ: ಮುಖ್ಯಮಂತ್ರಿ ಚಂದ್ರು.

ಶುಕ್ರವಾರ ಡಾ.ರಾ. ಸತ್ಯನಾರಾಯಣ ಅವರಿಂದ ಭಾರತೀಯ ಸಂಗೀತ ರಾಗಗಳು ಮತ್ತು ನೃತ್ಯಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆ. ವಿದ್ವಾನ್ ಆರ್.ಎಸ್. ನಂದಕುಮಾರ್ ಅವರಿಂದ ಗಾಯನ ಮತ್ತು ರಾಧಿಕಾ ನಂದಕುಮಾರ್ ಅವರಿಂದ ನೃತ್ಯ. ಅತಿಥಿ: ಮನು ಬಳಿಗಾರ್.

ಇಂದು ಉದ್ಘಾಟನೆ
ಉದ್ಘಾಟನೆ: ಡಿ.ವಿ.ಸದಾನಂದಗೌಡ. ಅತಿಥಿ: ಆರ್.ಅಶೋಕ. ಅಧ್ಯಕ್ಷತೆ: ಗೋವಿಂದ ಕಾರಜೋಳ. ಸಂಜೆ 6.30.

ಶನಿವಾರ ಸಂಜೆ 5.30ಕ್ಕೆ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ಗೀತಾ ವಸಂತ, ರೂಪಾ ಹಾಸನ, ಡಿ.ಆರ್.ಚಂದ್ರ ಮಾಗಡಿ, ಶಶಿ ಸಂಪಳ್ಳಿ, ಶ್ರೀದೇವಿ ಕಳಸದ, ತಾಜುಮಾ ಡಾ.ಕೆ.ಷರಿಫಾ, ಸುಬ್ಬು ಹೊಲೆಯಾರ್ ಅವರಿಂದ ಕವಿಗೋಷ್ಠಿ.

ನಂತರ ಪಂಡಿತ್ ಗಣಪತಿ ಭಟ್ ಅವರಿಂದ ಹಿಂದುಸ್ಥಾನಿ ಗಾಯನ. ಅತಿಥಿ: ಡಾ.ಮುದ್ದುಮೋಹನ್.ಭಾನುವಾರ ಸಂಜೆ 5.30ಕ್ಕೆ ಸೋಬಾನೆ ರಾಮಯ್ಯ ಮತ್ತು ತಂಡದಿಂದ ಜಾನಪದ ಗಾಯನ. ನಂತರ ಪರ್ಕಸಿವ್ ಆರ್ಟ್ಸ್ ಸೆಂಟರ್ ತಂಡದಿಂದ ತಾಳವಾದ್ಯ ಕಛೇರಿ. ಅತಿಥಿ: ಅನಂತಕುಮಾರ್.

ಸ್ಥಳ: ಪೀರ್ ಬಯಲು ರಂಗಸ್ಥಳ, ನಂ36, 9ನೇ ಮುಖ್ಯರಸ್ತೆ (ಬಿ.ವಿ.ಕಾರಂತ ರಸ್ತೆ), ಬನಶಂಕರಿ 2ನೇ ಹಂತ. ನಿತ್ಯಸಂಜೆ 6.30.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.