ADVERTISEMENT

ಸಂಸ್ಥಾಪನಾ ದಿನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಸುಮಾರು 29 ವರ್ಷಗಳಿಂದ ಬಡ ಮಕ್ಕಳಿಗೆ ಮೂಲಭೂತ ಶಿಕ್ಷಣ ನೀಡುತ್ತಾ ಬಂದಿರುವ ಶಿಶು ಮಂದಿರ ಬುಧವಾರ (ಜ.11)ರಂದು  ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ.

ಬಡ ಮಕ್ಕಳಿಗೆ ಶಿಕ್ಷಣ, ತರಬೇತಿ ಕೇಂದ್ರ, ಮಕ್ಕಳ ಕ್ಷೇಮಾಭಿವೃದ್ಧಿ ಕೇಂದ್ರ ಮತ್ತು ಸ್ತ್ರೀಯರಿಗೆ ಉದ್ಯೋಗ ಯೋಜನೆಗಳನ್ನು ರೂಪಿಸುವ ಸಂಸ್ಥೆಯಾಗಿರುವ ಶಿಶು ಮಂದಿರ ಇದುವರೆಗೂ ಅನೇಕ ಮಕ್ಕಳು ತಮ್ಮ ಗುರಿಮುಟ್ಟಲು ನೆರವಾಗಿದೆ. 

ಜನವರಿ 11ರಂದು ಮಾಸ್ಟ್ ಗ್ಲೋಬಲ್ ಅಧ್ಯಕ್ಷ ರಿಚರ್ಡ್ ಪೌಲ್  ಅವರು ಮೈ ಶಿಶು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸುತ್ತಿದ್ದು, ಇದೇ ವೇಳೆ 75 ಕುಟುಂಬದ ಮನೆಗಳಿಗೆ ಸೋಲರ್ ಲೈಟ್ ಅಳವಡಿಸುವ ಯೋಜನೆಗೂ ಚಾಲ್ತಿ ದೊರೆಯಲಿದೆ.

ಸೆಲ್ಕೊ ಕಂಪನಿಯ ಸಹಯೋಗದೊಂದಿಗೆ ಶಿಶು ಮಂದಿರ   ಸಂಸ್ಥೆ ಸೋಲಾರ್ ಲೈಟ್ ಅಳವಡಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಶಿಶು ಮಂದಿರದ ಸಂಸ್ಥಾಪಕ ಹೆಲ್ಲಾ ಮುಂದ್ರಾ ತಿಳಿಸಿದ್ದಾರೆ.

ಕಾರ್ಯಕ್ರಮ ಜನವರಿ 11ರಂದು ಗಾರ್ಡನ್ ಸಿಟಿ ಕಾಲೇಜಿನ ಆಡಿಟೋರಿಯಂನಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.