ADVERTISEMENT

ಸನ್ನಿ ಲಿಯೊನ್ ಹೊಸ ಆ್ಯಪ್

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಸನ್ನಿ ಲಿಯೋನ್
ಸನ್ನಿ ಲಿಯೋನ್   

ಮಾದಕ ಚೆಲುವೆ ಸನ್ನಿ ಲಿಯೋನ್‌ ಹೊಸ ವಿಚಾರಗಳ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ. 36ರ ವಯಸ್ಸಿನಲ್ಲಿಯೂ ಪಡ್ಡೆ ಹುಡುಗರ ಎದೆಗೆ ಕಾವು ನೀಡುವ ಸನ್ನಿಯ ಸೌಂದರ್ಯದ ಹಿಂದೆ ಮೇಕಪ್‌ ಕೈಚಳಕವೂ ಇದೆ. ತಮ್ಮ ಚೆಲುವಿಗೆ ಒಪ್ಪುವಂತೆ ಅವರು ಮಾಡಿಕೊಳ್ಳುವ ಮೇಕಪ್‌ ಕೌತುಕ ಮೂಡಿಸುತ್ತದೆ. ಈ ಚೆಲುವೆ ಸದ್ಯದಲ್ಲಿಯೇ ತಮ್ಮ ಮೇಕಪ್‌ ರಹಸ್ಯವನ್ನು  ಅಭಿಮಾನಿಗಳ ಮುಂದೆ ತರಲಿದ್ದಾರೆ.

ಸನ್ನಿ ಯಾರಿಗೆ ಯಾವ ರೀತಿಯ ಮೇಕಪ್‌ ಹೊಂದುತ್ತದೆ. ಲಿಪ್‌ಸ್ಟಿಕ್‌, ಐಲೈನರ್‌, ಫೌಂಡೇಷನ್‌...ಹೀಗೆ ಪ್ರಸಾದನ ಉತ್ಪನ್ನಗಳ ಆಯ್ಕೆ ಹೇಗಿರಬೇಕು ಎಂಬುದನ್ನು ತಿಳಿಸುವ ಆ್ಯಪ್‌ವೊಂದನ್ನು ಸದ್ಯದಲ್ಲಿಯೇ ಪರಿಚಯಿಸಲಿದ್ದಾರಂತೆ. ಈಗಾಗಲೇ ಇವರು, ಫೇಸ್‌ಬುಕ್‌ ಲೈವ್‌ನಲ್ಲಿ ಹಲವು ಬಾರಿ ಮೇಕಪ್‌ ತಂತ್ರವನ್ನು ತಿಳಿಸಿದ್ದಾರೆ.

‘ಮೇಕಪ್‌ ಕೌಶಲವನ್ನು ತಿಳಿಸುವ ಆ್ಯಪ್‌ ಬಿಡುಗಡೆ ಮಾಡಬೇಕು ಎಂಬುದು ನನ್ನ ಬಹುದಿನದ ಕನಸು. ಪ್ರಸಾದನ ಉತ್ಪನ್ನಗಳನ್ನು ಖರೀದಿಸುವುದು ದೊಡ್ಡ ತಲೆಬಿಸಿ. ನಾನು ನಿಮಗೆ ಸದ್ಯದಲ್ಲಿಯೇ ಇದಕ್ಕೆ ಪರಿಹಾರ ನೀಡುತ್ತೇನೆ’ ಎಂಬ ಭರವಸೆ ನೀಡಿದ್ದಾರೆ ಸನ್ನಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.