ADVERTISEMENT

ಸಾಯೋ ಆಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಗುರುಕನಕ ಶಿರಡಿ ಸಾಯಿ ಸೇವಾ ಸಂಘ ದ.ರಾ.ಬೇಂದ್ರೆ ಅವರ ಜನ್ಮದಿನದ ಪ್ರಯುಕ್ತ `ಸಾಯೋ ಆಟ~ ನಾಟಕ ಪ್ರದರ್ಶಿಸಿತು.

ಗೋಡೆ ಬಿದ್ದು ಸಾಯುವ ಕಳ್ಳನ ಮಡದಿಯು ನ್ಯಾಯಕೋರಿ ರಾಜನಿಗೆ ಅಹವಾಲು ಸಲ್ಲಿಸುತ್ತಾಳೆ. ಅಲ್ಲಿಂದ ಮುಂದುವರೆಯುವ ಕತೆ ಅಂತ್ಯದ ವೇಳೆಗೆ ರಾಜನೇ ಅಪರಾಧಿ ಎಂಬ ನಿರ್ಧಾರಕ್ಕೆ ಬರುತ್ತದೆ. ಅಪರಾಧಿಗೆ ಶಿಕ್ಷೆ ಆಗಲೇ ಬೇಕು ಎಂಬ ಕಾರಣಕ್ಕೆ ಕೊನೆಗೆ ರಾಜ ಹಾಗೂ ಮಂತ್ರಿ ನೇಣುಗಂಬವನ್ನೇರುತ್ತಾರೆ.

ಸಂಗೀತ ಹಾಗೂ ಹಾಡುಗಳು, ಉತ್ತಮ ಬೆಳಕು, ರಂಗಸಜ್ಜಿಕೆ ನಾಟಕಕ್ಕೆ ಮತ್ತಷ್ಟು ಮೆರುಗು ತುಂಬಿದ್ದವು. ವರದರಾಜ್ ಮೆಮೊರಿಯಲ್ ಸಭಾಂಗಣದಲ್ಲಿ ಪ್ರದರ್ಶನಗೊಂಡ ನಾಟಕವನ್ನು ಜಾದುಗಾರ ಪ್ರೊ.ರಾಜ್ ಉದ್ಘಾಟಿಸಿದ್ದರು.
 
ಕಲಾವಿದರಾದ ಎಂ.ಪಿ.ಎಸ್. ಕುಮಾರ್, ಎಂ.ಎಸ್.ರಮೇಶ್, ನರಸಿಂಹರಾಜು, ನಾರಾಯಣದತ್ತ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.