ADVERTISEMENT

ಸಾಹುಕಾರ್ ಬೆಳ್ಳಿ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಕರ್ನಾಟಕ ಚಲನಚಿತ್ರ ಅಕಾಡೆಮಿ: ಶನಿವಾರ ತಿಂಗಳ ಬೆಳ್ಳಿಹೆಜ್ಜೆಯಲ್ಲಿ ಚಿತ್ರ ನಟಿ ಸಾಹುಕಾರ್ ಜಾನಕಿ.

ಭಾಷೆಗಳ ಗಡಿ ಮೀರಿ ಪ್ರಮುಖ ನಟಿಯಾಗಿ ಹೆಸರು ಗಳಿಸಿದ ಸಾಹುಕಾರ್ ಜಾನಕಿ ಅವರು ಚಲನಚಿತ್ರ ಕ್ಷೇತ್ರಕ್ಕೆ ಬರುವ ಮುಂಚೆ ಆಕಾಶವಾಣಿ ಕಲಾವಿದೆಯಾಗಿದ್ದರು.

ಅವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ `ದೇವಕನ್ನಿಕಾ~. `ಸಾಹುಕಾರ್~ ಚಿತ್ರದಲ್ಲಿನ ಅವಿಸ್ಮರಣೀಯ ಅಭಿನಯದಿಂದಾಗಿ ಸಾಹುಕಾರ್ ಎಂಬ ನಾಮಧೇಯ ಅವರ ಹೆಸರಿನೊಂದಿಗೆ ಶಾಶ್ವತವಾಗಿ ಉಳಿದುಕೊಂಡಿತು.

ಗೌರಿ, ಭಾಗ್ಯ ಚಕ್ರ, ಕನ್ಯಾರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ನಾಯಕಿಯಾಗಿದ್ದ ಸಾಹುಕಾರ್ ಜಾನಕಿ ಅವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಯಿಗೆ ತಕ್ಕ ಮಗ, ಕುಲಪುತ್ರ, ಶಬ್ದವೇದಿ ಹೀಗೆ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ಅಭಿನಯಿಸಿ ಮನೆಮಾತಾಗಿದ್ದಾರೆ. ಇವರ ಸಿನಿಮಾ ಕೃಷಿಯಲ್ಲಿನ ಸಾಧನೆಗೆ ಕನ್ನಡ ವಾಕ್ಚಿತ್ರ ಅಮೃತೋತ್ಸವ, ಕಲೈಮಾಮಣಿ, ಎಂ.ಜಿ.ಆರ್ ಪ್ರಶಸ್ತಿಗಳು ಸಂದಿವೆ.

ಸ್ಥಳ: ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್ (ಪಾಲಿಕೆ ಎದುರು). ಸಂಜೆ 4.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.