ಪ್ರಜಾವಾಣಿ ಮೆಟ್ರೊದ ‘ನಾ ಕಂಡ ಬೆಂಗಳೂರು’ ವಿಭಾಗದಲ್ಲಿ ಸ್ಯಾಂಕಿ ಕೆರೆಯ ಉದ್ಯಾನದಲ್ಲಿ ನಿಂತಿರುವ ವೀಣೆ ಬಾಲಕೃಷ್ಣ ಅವರ ಚಿತ್ರದಲ್ಲಿ ಸುತ್ತಲೂ ಹಾರುತ್ತಿರುವ ಹಕ್ಕಿಗಳ ಚಿತ್ರ (ಜೂನ್ 6) ಚೆನ್ನಾಗಿತ್ತು.
ಪ್ರಸಿದ್ಧ ವೀಣಾ ವಾದಕರಾದ ದೊರೆಸ್ವಾಮಿ ಅಯ್ಯಂಗಾರ್ ಅವರ ಮಗ ಬಾಲಕೃಷ್ಣ ಅವರು ತಂದೆಯ ಬಗ್ಗೆ, ತಮ್ಮ ವೀಣಾಭ್ಯಾಸದ ಬಗ್ಗೆ, ಆಗಿನ ಬೆಂಗಳೂರು ಇದ್ದ ರೀತಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದೇ ಪುಟದಲ್ಲಿದ್ದ ‘ನಿಸಾರ್ ಜ್ಞಾಪಕ ಶಾಲೆಯಲ್ಲಿ ಮಾಸ್ತಿ ನೆನಪು’ ಸಹ ಇಷ್ಟವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.