ADVERTISEMENT

ಸೇವಾ ಸದನದಲ್ಲಿ ಶ್ರೀದೇವಿ ಮಹಾತ್ಮೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2012, 19:30 IST
Last Updated 6 ಜೂನ್ 2012, 19:30 IST

ಸಂಚಾರಿ ಥಿಯೇಟರ್ ತಂಡದಿಂದ ಶನಿವಾರ (ಜೂ.9) `ಶ್ರೀದೇವಿ ಮಹಾತ್ಮೆ~ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಕತೆಗಾರ ವಸುಧೇಂದ್ರ ಅವರ `ಚೇಳು~ ಕಥಾಸಂಕಲನದಲ್ಲಿನ ಕತೆ ಆಧರಿಸಿದ ನಾಟಕ ಇದಾಗಿದೆ. ಓಟದ ಬದುಕಿಗೆ ಹೆಸರಾಗಿರುವ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಬೇರೆ ಬೇರೆ ವರ್ಗದ ಜನರು ಬದುಕನ್ನು ಎದುರುಗೊಳ್ಳುವ ಸನ್ನಿವೇಶಗಳು ಮತ್ತು ಅದನ್ನು ಅರ್ಥೈಸಿಕೊಳ್ಳುವ ಮೂಲಕ ಜೀವನದ ಅರ್ಥ ಗ್ರಹಿಸುವ ಪರಿ ರಂಗದ ಮೇಲೆ ಮನೋಜ್ಞವಾಗಿ ಮೂಡಲಿದೆ.

ಸುರಭಿ, ವಿಜಯ್, ಚಂದ್ರಕೀರ್ತಿ ರಂಗದ ಮೇಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಶಿಧರ ಅಡಪ (ರಂಗಸಜ್ಜಿಕೆ), ಮುಸ್ತಫಾ (ಬೆಳಕು), ಗಜಾನನ.ಟಿ.ನಾಯ್ಕ (ಸಂಗೀತ), ಮಂಗಳಾ.ಎನ್ (ನಿರ್ದೇಶನ) ನಾಟಕಕ್ಕಾಗಿ ಕೆಲಸ ಮಾಡಿದ್ದಾರೆ.
ಸ್ಥಳ: ಸೇವಾ ಸದನ, ಮಲ್ಲೇಶ್ವರಂ. ಸಂಜೆ 7. ಮಾಹಿತಿಗೆ: 88843 45569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.