ADVERTISEMENT

ಸ್ಟೋರೀಸ್ ಇನ್ ಎ ಸಾಂಗ್ ನಾಟಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST
ಸ್ಟೋರೀಸ್ ಇನ್ ಎ ಸಾಂಗ್ ನಾಟಕ
ಸ್ಟೋರೀಸ್ ಇನ್ ಎ ಸಾಂಗ್ ನಾಟಕ   

ಸಂಗೀತಗಾರರ ಹೋರಾಟದ ಬದುಕನ್ನು ಅನಾವರಣಗೊಳಿಸುವ `ಸ್ಟೋರೀಸ್ ಇನ್ ಎ ಸಾಂಗ್~ ನಾಟಕಕ್ಕೆ ಹಿಮಾಲಯ ಡ್ರಗ್ ಕಂಪೆನಿ ಸಹಯೋಗ ನೀಡಿದೆ. ಈ ನಾಟಕ ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಪ್ರದರ್ಶಿತವಾಗಲಿದೆ. ಸುನೀಲ್ ಶಾನಭಾಗ್ ನಾಟಕ ನಿರ್ದೇಶಿಸಿದ್ದು, ಶುಭಾ ಮುದ್ಗಲ್ ಹಾಗೂ ಅನೀಶ್ ಪ್ರಧಾನ್ ಸಂಗೀತ ನೀಡಿದ್ದಾರೆ.

ರಂಗಭೂಮಿಗೆ ದೊಡ್ಡ ಪರಂಪರೆ ಇದೆ. ಈ ಕಲೆಯನ್ನು ಪ್ರೋತ್ಸಾಹಿಸುವುದು ಹಿಮಾಲಯ ಡ್ರಗ್ ಕಂಪೆನಿ ಉದ್ದೇಶ. ಅಂದಹಾಗೆ `ಸ್ಟೋರೀಸ್ ಇನ್ ಸಾಂಗ್~ ನಾಟಕ ಸಂಗೀತಗಾರರು ಎದುರಿಸುತ್ತಿರುವ ಸಂಕಷ್ಟ ಹಾಗೂ ಹೋರಾಟದ ಬದುಕನ್ನು ದೃಶ್ಯರೂಪದಲ್ಲಿ ಕಟ್ಟಿಕೊಡಲಿದೆ. ಕಜ್ರಿ, ಠುಮ್ರಿ-ದಾದ್ರಾ, ಖಯಾಲ್ ಮೊದಲಾದ ಪ್ರಕಾರದಲ್ಲಿ ಹಾಡುವ ಸಂಗೀತಗಾರರು ನಿತ್ಯ ಅನುಭವಿಸುತ್ತಿರುವ ಸಂಕಷ್ಟದ ಮೇಲೆ ಈ ನಾಟಕ ಬೆಳಕು ಚೆಲ್ಲಲಿದೆ.

`ಸ್ಟೋರೀಸ್ ಇನ್ ಎ ಸಾಂಗ್~ ನಾಟಕ ರಂಗಶಂಕರದಲ್ಲಿ ಮಾರ್ಚ್ 9 (ಸಂಜೆ 7.30), 10 (ಸಂಜೆ 7.30) ಹಾಗೂ 11ರಂದು (ಮಧ್ಯಾಹ್ನ 3.30 ಮತ್ತು ಸಂಜೆ 7.30) ಪ್ರದರ್ಶನಗೊಳ್ಳಲಿದೆ. ಟಿಕೆಟ್ ಬುಕಿಂಗ್‌ಗಾಗಿ. http://in.bookmyshow.com/plays/Stories-In-A-Song/ET00009062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.