ADVERTISEMENT

ಸ್ನೇಹದ ಬ್ಯಾಂಡ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST
ಸ್ನೇಹದ ಬ್ಯಾಂಡ್
ಸ್ನೇಹದ ಬ್ಯಾಂಡ್   

ಸ್ನೇಹಿತರಿಲ್ಲದ ಜೀವನ ಅಪೂರ್ಣವೇ ಸರಿ. ನೆಚ್ಚಿನ ಗೆಳೆಯ-ಗೆಳತಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿ ಅವರೊಂದಿಗೆ ಕೆಲಕ್ಷಣ ಸಂತಸದಿಂದ ಕಳೆಯಲು ಸ್ನೇಹಿತರ ದಿನ ಪ್ರಶಸ್ತವಾದದ್ದು. ಅಪೂರ್ವ ಗೆಳೆತನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಮತ್ತು ಆ ದಿನವನ್ನು ನೆನಪಿನಲ್ಲಿಡುವ ಉದ್ದೇಶದಿಂದ 92.7 ಬಿಗ್ ಎಫ್‌ಎಂ ಸ್ಯಾಂಡಲ್‌ವುಡ್ ತಾರೆಯಾದ ನೀತು ಮತ್ತು ವಿಶಾಲ್ ಹೆಗ್ಡೆ ಅವರನ್ನು ಆಹ್ವಾನಿಸಿತ್ತು.

ಜತೆಗೆ  ಗಂಗಮ್ಮ ಹೊಂಬೇಗೌಡ ಬಾಲಕಿಯರ ಪ್ರೌಢಶಾಲೆ ಮಕ್ಕಳು ಬಂದಿದ್ದರು.
ತಾರೆಗಳಿಬ್ಬರೂ ಮಕ್ಕಳಿಗೆ ಬ್ಯಾಂಡ್ ಕಟ್ಟಿದರು. ಅವರಿಂದ ಸ್ನೇಹದ ದಾರವನ್ನು ಕಟ್ಟಿಸಿಕೊಳ್ಳುವಾಗ ವಿದ್ಯಾರ್ಥಿಗಳ ಎದೆಯಲ್ಲಿ ಸಂತಸದ ಬುಗ್ಗೆ.

ನೀತು ಮತ್ತು ವಿಶಾಲ್ ಕೂಡ ಮಕ್ಕಳೊಂದಿಗೆ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳು ತಮ್ಮ ಇಷ್ಟದ ತಾರೆಯರನ್ನು ನೋಡಿ ಖುಷಿಪಟ್ಟರು. ಅವರಿಗೆ ಪ್ರೀತಿಯಿಂದ ಬ್ಯಾಂಡ್ ಕಟ್ಟಿ ಸ್ನೇಹಿತರ ದಿನವನ್ನು ಮಧುರವಾಗಿಸಿಕೊಂಡರು. ಈ ಮೂಲಕ 92.7 ಬಿಗ್ ಎಫ್‌ಎಂ ಸ್ನೇಹಿತರ ದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.