ADVERTISEMENT

ಹಬ್ಬದೂಟ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಖಾನಾ, ಯಕ್ಷಗಾನ
ದೀಪಾವಳಿಯ ಸಾಂಪ್ರದಾಯಿಕ ಹಬ್ಬದೂಟ ಮತ್ತು ಈ ಬೆಳಕಿನ ಹಬ್ಬದ ಮಹತ್ವ ಸಾರುವ ಯಕ್ಷಗಾನ ಮೇಳ ಎರಡನ್ನು ಮೇಳೈಸಿ ಹಬ್ಬದ ಸವಿಯನ್ನು ಹೆಚ್ಚಿಸುವ ವಿನೂತನ ಕಾರ್ಯಕ್ರಮವನ್ನು ಸಾಗರ್ ಹೋಟೆಲ್ ಮಂಗಳವಾರ ಮಧ್ಯಾಹ್ನ ಹಮ್ಮಿಕೊಂಡಿದೆ.

ಕಜ್ಜಾಯ, ಕರ್ಚಿಕಾಯಿ, ಹೋಳಿಗೆ, ಕಡ್ಲೆಬೇಳೆ ಪಾಯಸ, ಹೆಸರು ಬೇಳೆ ಪಾಯಸ, ನಿಪ್ಪಟ್ಟು, ಬಜ್ಜಿ, ವೈವಿಧ್ಯಮಯ ತರಕಾರಿ ಪಲ್ಯಗಳು, ಸುಕರುಂಡೆ, ಗೋಧಿ ಪರಮಾನ್ನ, ಸಾಂಬಾರ್, ಹಪ್ಪಳ, ವಡೆ ಸೇರಿದಂತೆ 26 ಸಾಂಪ್ರದಾಯಿಕ ಭಕ್ಷ್ಯಗಳನ್ನು ಹಬ್ಬದ ಊಟ ಒಳಗೊಂಡಿದೆ. ಇದರ ಜತೆಗೆ ಸಾಲಿಗ್ರಾಮದ ಯಕ್ಷಗಾನ ಕಲಾವಿದರು ದೀಪಾವಳಿಯ ಪುರಾಣ ಮಹಿಮೆ, ಐತಿಹ್ಯವನ್ನು ತಿಳಿಸಿಕೊಡುವ ಯಕ್ಷರೂಪಕವನ್ನು ಪ್ರದರ್ಶಿಸಲಿದ್ದಾರೆ.

ಇದರ ಜತೆಗೆ ಹೋಟೆಲ್‌ನ ಉದ್ಯೋಗಿ ಜಯರಾಮ ಶೆಟ್ಟಿ ಅವರು ತರಕಾರಿ ಮತ್ತು ಹಣ್ಣಿನಲ್ಲಿ ನರಕಾಸುರ ವಧೆ, ಬಲಿ ಚಕ್ರವರ್ತಿಯ ತ್ಯಾಗ, ದೀಪಾವಳಿಗೆ ಸಂಬಂಧಿಸಿದ ಪುರಾಣ ದೃಶ್ಯಾವಳಿಗಳನ್ನು ರಚಿಸಿ ಪ್ರದರ್ಶಿಸಲಿದ್ದಾರೆ.
 ಸ್ಥಳ: ಸಾಗರ್ ಹೋಟೆಲ್ (ಆದಿಚುಂಚನಗಿರಿ ಮಠ ಸಮೀಪ), ವಿಜಯನಗರ, ಮುಖ್ಯರಸ್ತೆ.

ಮಹಾರಾಜ
ದೀಪಾವಳಿ ಪ್ರಯುಕ್ತ ಪಶ್ಚಿಮ ಕಾರ್ಡ್ ರಸ್ತೆ ಶಿವನಗರದ ಹೋಟೆಲ್ ಮಹಾರಾಜದಲ್ಲಿ ಹಬ್ಬದ ಭೋಜನ ಸವಿಯಬಹುದು.

ಕರ್ನಾಟಕದಲ್ಲಿ ವಿವಿಧ ಕಡೆಯ ಜನಪ್ರಿಯ ತಿನಿಸುಗಳು ಇಲ್ಲಿನ ಪ್ರಮುಖ ಆಕರ್ಷಣೆ. ಹಬ್ಬಕ್ಕೆ 99 ರೂಪಾಯಿಯಲ್ಲಿ 2 ಬಗೆಯ ಪಲ್ಯ, ಚಟ್ನಿ, ಹೋಳಿಗೆ, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ರಾಗಿ ರೊಟ್ಟಿ ಮತ್ತಿತರ ವಿಶೇಷ ಖಾದ್ಯಗಳನ್ನು ಇದು ಒಳಗೊಂಡಿದೆ.
ಸ್ಥಳ: 1ನೇ ಮುಖ್ಯರಸ್ತೆ, ಶಿವನಗರ. ಮಾಹಿತಿಗೆ; 94482 61201. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.