ADVERTISEMENT

ಹಿರಿಯ ಕಲಾವಿದರ ವರ್ಣ ವೈಭವ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಕರ್ನಾಟಕದ ಹಿರಿಯ ಕಲಾವಿದರು ಹಾಗೂ ಚಿತ್ರಕಲಾ ಲೋಕದಲ್ಲಿ ಇದೇ ತಾನೇ ಉದಯಿಸಿ ಭರವಸೆ ಮೂಡಿಸುತ್ತಿರುವ ಅಪರೂಪದ ಕಲಾವಿದರ ಅಮೂಲ್ಯ ಕಲಾಕೃತಿಗಳ ಪ್ರದರ್ಶನವನ್ನು ಅಬ್‌ಸಟ್ಯೆಾಕ್ಟ್ ಆರ್ಟ್ ಗ್ಯಾಲರಿ ಮತ್ತು ಬೆಂಗಳೂರು ಆರ್ಟ್ ಫೌಂಡೇಶನ್ ಜತೆಗೂಡಿ ಏರ್ಪಡಿಸಿದೆ. ಪ್ರದರ್ಶನದ ಹೆಸರು `ಹ್ಯೂಸ್ ಆಫ್ ದಿ ಸಾಯಿಲ್~.

ಈ ಪ್ರದರ್ಶನದಲ್ಲಿ ಕರ್ನಾಟಕದ ಹಿರಿಯ-ಕಿರಿಯ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಎಲ್ಲ ಕಲಾವಿದರು ತಮ್ಮದೇ ಶೈಲಿಯಲ್ಲಿ, ವಿವಿಧ ಮಜಲುಗಳಲ್ಲಿ ಚಿತ್ರಿಸಿದ ಕಲಾಕೃತಿಗಳು ಪ್ರದರ್ಶನಗೊಳ್ಳಲಿರುವುದು ಮತ್ತೊಂದು ವಿಶೇಷ. ಈ ಕಲಾ ಪ್ರದರ್ಶನದಲ್ಲಿ ಮನಸೂರೆಗೊಳ್ಳುವ ಕಲಾಕೃತಿಗಳು, ಸಂಸ್ಕೃತಿ ಬಿಂಬಿಸುವ ಚಿತ್ರಗಳು ಕಲಾಪ್ರಿಯರಿಗೆ ಇಷ್ಟವಾಗಲಿದೆ.

ಕಲಾಪ್ರದರ್ಶನದಲ್ಲಿ ಸಮಕಾಲೀನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಕಲಾಕೃತಿಗಳು ಮಾತಿಗೆ ಸಿಕ್ಕದ ಅವರ್ಣನೀಯ ಅನುಭೂತಿಯನ್ನು ಹುಟ್ಟುಹಾಕುವ ಬಹುಮುಖಿ ಕಲಾಕೃತಿಗಳ ಸಮ್ಮಿಶ್ರಣದಂತಿವೆ. ಇಲ್ಲಿ ಅಮೂರ್ತ ಕಲಾಕೃತಿಗಳ ಜತೆಗೆ ಕಲಾವಿದರ ಭಾವಕ್ಕೆ ಸಿಕ್ಕ ವಿವಿಧ ಭಾವಾನುಭವಗಳನ್ನು ಕುಂಚದ ಮೇಲೆ ಸುಂದರವಾಗಿ ಮೂಡಿಸಿದ್ದಾರೆ.

ಖ್ಯಾತ ಕಲಾವಿದರಾದ ಎಂ.ಜಿ. ದೊಡ್ಡಮನಿ, ಪ್ರಕಾಶ್ ನಾಯಕ್, ರಾಣಿ ರೇಖಾ, ಕೆ.ವಿ.ಕಾಳೆ, ಡಿ.ಕಾಮ್‌ಕರ್, ಕೃಷ್ಣ ರಾಯಚೂರು, ಓ.ವೆಂಕಟೇಶ್, ಜಿ.ದೊಡ್ಡಮನಿ, ನಿರ್ಮಲಾ, ಡಿ.ಕಾಳೆ, ಕೆ.ಎಂ.ಕೃಷ್ಣ, ಜಿ.ಎಸ್.ಭವಾನಿ, ತಿರುನಾವ್‌ಕರಾಸ್, ವಿಠಲ್ ರೆಡ್ಡಿ, ಕೆ. ಶಿವಕುಮಾರ್, ವೀರೇಶ್ ರುದ್ರಸ್ವಾಮಿ, ಸಂಗಮ್ ದೊಡ್ಡಮನಿ, ಪ್ರಶಾಂತ್ ಪೂಜಾರಿ, ಎಂ.ಎಸ್.ಲಿಂಗರಾಜ್, ಎನ್.ಮೂರ್ತಿ, ಮಂಜುನಾಥ್, ವಿಷ್ಣುಕುಮಾರ್, ಶಶಿಕಿರಣ್ ದೇಸಾಯಿ, ಆರ್.ಎನ್. ಶೀಲವಂತ, ಎಂ.ಸತೀಶ್, ಎಚ್. ಮಂಜುನಾಥ್, ಎಂ.ಹೆಗ್ಗಡೆ ಅವರ ವಿಭಿನ್ನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಅಬ್‌ಸಟ್ಯೆಾಕ್ಟ್ ಗ್ಯಾಲರಿ ಕಳೆದ ಹತ್ತು ವರ್ಷಗಳಿಂದ ಹಿರಿ-ಕಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆಯಾಗುತ್ತಾ ಬಂದಿದೆ. ಸ್ಥಳೀಯ ಕಲಾವಿದರ ಜತೆಗೆ ಅಂತರರಾಷ್ಟ್ರೀಯ ಕಲಾವಿದರ ಕಲಾಕೃತಿಗಳೂ ಇಲ್ಲಿ ಪ್ರದರ್ಶನಗೊಂಡಿವೆ.

ಅಕ್ಟೋಬರ್ 8ರಂದು ಸಂಜೆ 5ಕ್ಕೆ ಬೆಂಗಳೂರು ವಿ.ವಿ. ವಿಶುಯಲ್ ಆರ್ಟ್ಸ್ ವಿಭಾಗದ ಡೀನ್ ಜಯ್‌ಕುಮಾರ್ ಮತ್ತು ಕಲಾವಿದ ಎಚ್.ಗಿರೀಶ್ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಅ.13ರವರೆಗೆ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಸ್ಥಳ: ಅಬ್‌ಸಟ್ಯೆಾಕ್ಟ್ ಆರ್ಟ್ ಗ್ಯಾಲರಿ, ನಂ.8, ಕನ್ನಿಂಗ್‌ಹ್ಯಾಂ ರಸ್ತೆ, ರಿಲೆಯನ್ಸ್ ಟೈಂಔಟ್ ಎದುರು. ಮಾಹಿತಿಗೆ: 080 4123 5444. ಬೆಳಿಗ್ಗೆ 11ರಿಂದ ಸಂಜೆ 7.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.