ADVERTISEMENT

ಹೀಗಾದ್ರೆ ಹೇಗೆ?

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:30 IST
Last Updated 1 ಏಪ್ರಿಲ್ 2011, 19:30 IST

ಬಿಸಿಲಿನ ತಾಪ, ಏರುತ್ತಿರುವ ಕ್ರಿಕೆಟ್ ಜ್ವರದ ಬಿಸಿಯಿಂದ ಬಳಲಿದ್ದೀರಾ? ಹಾಗಾದರೆ ಈ ವಾರಾಂತ್ಯ ರಂಗಶಂಕರಕ್ಕೆ ಬನ್ನಿ. ತಣ್ಣಗೆ ಕುಳಿತು ಕ್ರಿಯೇಟಿವ್ ಥಿಯೇಟರ್ ನಿಮಗಾಗಿಯೇ ಪ್ರದರ್ಶಿಸಲಿಸುವ ಸದಭಿರುಚಿಯ ಹಾಸ್ಯ ನಾಟಕ ನೋಡಿ ಹೊಟ್ಟೆ ತುಂಬಾ ನಕ್ಕುಬಿಡಿ.

ಶನಿವಾರ ಪ್ರಮೋದ ಶಿಗ್ಗಾಂವ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ರೂಪುಗೊಂಡ ಜನಪ್ರಿಯ ಹಾಸ್ಯ ನಾಟಕ ‘ಹೀಗಾದ್ರೆ ಹೇಗೆ?’ (ಮೂಲ: ಟಿ. ಸುನಂದಮ್ಮನವರ ಲೇಖನಗಳು. ರಂಗರೂಪ: ಡಾ. ಕೆ.ವೈ. ನಾರಾಯಣ ಸ್ವಾಮಿ. ಕಲಾವಿದರು: ಲಕ್ಷ್ಮಿ ಚಂದ್ರಶೇಖರ್, ಸುಂದರ್ ಮತ್ತಿತರರು. ಮೇಕಪ್: ರಾಮಕೃಷ್ಣ ಕನ್ನರ್ಪಾಡಿ. ಸಂಗೀತ: ಗಜಾನನ ನಾಯಕ್. ಗಾಯನ: ಎಂ.ಡಿ.ಪಲ್ಲವಿ. ಬೆಳಕು: ಮುದ್ದಣ್ಣ ರಟ್ಟೆಹಳ್ಳಿ) 89 ನೆ ಪ್ರದರ್ಶನ. ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30. ಟಿಕೆಟ್ ದರ 70 ರೂ. ಮುಂಗಡ ಬುಕಿಂಗ್‌ಗೆ: 96206 04479. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.