ADVERTISEMENT

‘ಹಾಸ್ಮಟ್‌’ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಮೆಗ್ರಾತ್‌ ರಸ್ತೆಯಲ್ಲಿರುವ ಹಾಸ್ಮಟ್‌ ಆಸ್ಪತ್ರೆಯು ಮಹಿಳಾ ದಿನಾಚರಣೆ ಅಂಗವಾಗಿ ಮಾ.8ರ ಶನಿವಾರ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.

ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಡೆಯುವ ಶಿಬಿರದಲ್ಲಿ ಮೂಳೆ ಸಾಂದ್ರತೆ, ಡಯಟಿಷಿಯನ್, ದೇಹದಲ್ಲಿನ ಕೊಬ್ಬಿನ ಅಂಶದ ತಪಾಸಣೆ (ಬಿಎಂಐ) ನಡೆಸಲಾಗುವುದು. ಎಕ್ಸ್‌ರೇ ಮತ್ತಿತರ ತಪಾಸಣೆಗಳನ್ನು ಅಂದು ರಿಯಾಯಿತಿ ದರದಲ್ಲಿ ಮಾಡಿಸಿಕೊಳ್ಳಲು ಅವಕಾಶವಿದೆ. ಮಾಹಿತಿಗೆ ಸಂಪರ್ಕಿಸಿ: 25593796/97.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.