ADVERTISEMENT

ಸಂಭ್ರಮದ ಚಿಣ್ಣರ ವಿಜ್ಞಾನ ಹಬ್ಬ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 19:45 IST
Last Updated 8 ಜನವರಿ 2020, 19:45 IST
ಮೇಳಕ್ಕೆ ಬಂದ ಗಾಂಧಿ ವೇಷಧಾರಿ
ಮೇಳಕ್ಕೆ ಬಂದ ಗಾಂಧಿ ವೇಷಧಾರಿ   
""
""

ಕೋಲಾಟದ ಕುಣಿತ, ಕಂಸಾಳೆಯ ಒಡಪು, ಡೊಳ್ಳಿನ ಅಬ್ಬರ, ಪಟ ಕುಣಿತ, ಸುಗ್ಗಿಯ ನೃತ್ಯ ಹೀಗೆ ಚಿಣ್ಣರೇ ಜಾನಪದ ಕಲೆಯ ವಿವಿಧ ಪ್ರಕಾರಗಳ ನೃತ್ಯಗಳನ್ನು ಮಾಡುತ್ತಿದ್ದಾಗ ಗ್ರಾಮಸ್ಥರು ಬೆಕ್ಕಸ ಬೆರಗಾದರು. ‘ಇವರು ನಮ್ಮ ಮಕ್ಕಳೇ’ ಎನ್ನುವ ಉದ್ಗಾರ ತೆಗೆದರು.

ಇದೆಲ್ಲಾ ಕಂಡುಬಂದಿದ್ದು, ಹೆಸರಘಟ್ಟ ಹೋಬಳಿ ಕಾಕೋಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಜಿಲ್ಲಾ ಪಂಚಾಯಿತಿ ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದಲ್ಲಿ.

ಅಡಿಕೆ ತಟ್ಟೆಯಲ್ಲಿ ಮೂಡಿದ ಚಿತ್ರಗಳು

ಪ್ರದರ್ಶನದಲ್ಲಿ ನೇಗಿಲು, ಒನಕೆ, ಮನುಷ್ಯನ ಅಸ್ಥಿಪಂಜರ, ಹೃದಯದ ಕಾರ್ಯ ವೈಖರಿ, ಸಮುದ್ರದಲ್ಲಿದ್ದ ಜೀವಿಗಳು, ಸೌರಗ್ರಹದಲ್ಲಿ ಸಂಭವಿಸುವ ಗ್ರಹಣಗಳ ಸ್ತಬ್ದ ಚಿತ್ರಗಳು ವಿದ್ಯಾರ್ಥಿಗಳ ಗಮನ ಸೆಳೆದವು. ಹುಲಿಕಲ್ ನಟರಾಜ್ ಅವರು ಸಾದರಪಡಿಸಿದ ಪವಾಡಗಳ ಬಯಲು ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಅಸಕ್ತಿಯನ್ನು ಮೂಡಿಸುವಂತೆ ಮಾಡಿತು. ವಿನೋದ ವಿಜ್ಞಾನದ ಪ್ರಾಯೋಗಿಕ ನೆಲೆಗಳಿಗೆ ಚಿಣ್ಣರು ಸಂತಸಗೊಂಡರು.

ADVERTISEMENT

‘ವಿಜ್ಞಾನ ಹಬ್ಬದಲ್ಲಿ ಕೇವಲ ವಿಜ್ಞಾನ ವಿಷಯಗಳು ಮಾತ್ರ ಇರಲಿಲ್ಲ. ಬದಲಿಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವ ವಿಧಾನಗಳು, ಕಲಿಕೆಯ ಮನಸ್ಥಿತಿ, ಯೋಗದಿಂದ ಆಗುವ ಪ್ರಯೋಜನಗಳು, ವ್ಯಕ್ತಿತ್ವ ವಿಕಾಸದಲ್ಲಿ ಧ್ಯಾನದ ಪಾತ್ರ ಹೀಗೆ ಅನೇಕ ವಿಷಯಗಳನ್ನು ಶಿಕ್ಷಕರು ಕಲಿಸಿ ಕೊಟ್ಟರು. ಶಿಕ್ಷಣದಿಂದ ಒದಗುವ ಸಂಸ್ಕಾರ ನಮಗೆ ಇಲ್ಲಿ ತಿಳಿದು ಬಂತು’ ಎಂದು ವಿದ್ಯಾರ್ಥಿನಿ ಗಾಯಿತ್ರಿ ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಯಲಹಂಕ ಶಾಸಕ ಎಸ್.ಅರ್. ವಿಶ್ವನಾಥ್ ಉದ್ಘಾಟಿಸಿದರು. ಸೊಣೇನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಉಪಸ್ಥಿತರಿದ್ದರು. ವಿಜ್ಞಾನ ಮೇಳದಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಸುಮಾರು 800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸೈನಿಕ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.