ADVERTISEMENT

ಯುಗಾದಿಗೆ ತನಿಷ್ಕ್ ಆಭರಣ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 19:30 IST
Last Updated 31 ಮಾರ್ಚ್ 2019, 19:30 IST
   

ಈ ಯುಗಾದಿ ಹಬ್ಬಕ್ಕೆ ತನಿಷ್ಕ್ ‘ಸ್ವಯಂ’ ಹೆಸರಿನ ನೂತನ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಇದು, ಇದು ಸ್ವಯಂ ಪ್ರೀತಿಯ ಚಿಂತನೆಯನ್ನು ಅಭಿವ್ಯಕ್ತಿಗೊಳಿಸಲಿದೆ. ಪ್ರತಿಯೊಂದು ಆಭರಣವು ಒಂದು ಸ್ಮರಣಿಕೆ ಯಾಗಿದ್ದು, ಬದುಕಿನ ಕಿರು ಯಶಸ್ಸು, ವೈಯಕ್ತಿಕ ಸಾಧನೆಗೆ ಸಾಕ್ಷಿಯಾಗಲಿದೆ.

ಈ ಸಂಗ್ರಹದ ಆಭರಣಗಳು ಮಹಿಳೆಯರಿಗೆ ಸಂತಸದ ಸಣ್ಣ ಅನುಭವಗಳನ್ನು ಆನಂದಿಸಬಹುದಾಗಿದೆ. ಏಕೆಂದರೆ, ಕೆಲವೊಮ್ಮೆ ಅತ್ಯುತ್ತಮ ಕೊಡುಗೆಗಳೆಂದರೆ ನಮಗೆ ನಾವು ಕೊಟ್ಟುಕೊಳ್ಳುವುದಾಗಿದೆ. ಅತ್ಯುತ್ತಮವಾದ ಚಿನ್ನ, ವಜ್ರ, ಕುಂದನ್, ಪೋಲ್ಕಿ ಆಭರಣಗಳನ್ನು ಕೇವಲ ರೂ. 10,000ಕ್ಕೆ ಆನಂದಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

***
ಹಶ್‌ ಪಪ್ಪೀಸ್‌ ಶೂಗಳು ಮಾರುಕಟ್ಟೆಗೆ
ಹಶ್‌ ಪಪ್ಪೀಸ್‌ಗಳ ರೀತಿಯಲ್ಲಿ ವಾಕಿಂಗ್‌ ಮಾಡಲು ಬಯಸುವವರಿಗಾಗಿ ವಿಭಿನ್ನ ಶೂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇವು ಐದು ಪ್ಯಾಡ್‌ ತಂತ್ರಜ್ಞಾನವನ್ನು ಒಳಗೊಂಡಿದ್ದು, ಪಾದವನ್ನು ರಕ್ಷಿಸುತ್ತವೆ. ಫೋಂ ಸೋಲ್‌ ಬಳಕೆಯಾಗಿದೆ. ಮಹಿಳೆ ಹಾಗೂ ಪುರುಷರ ಒಟ್ಟು 13 ಮಾದರಿಯ ಶೂಗಳಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.ಹಶ್‌ ಪಪ್ಪೀಸ್ ವೋಲ್ಟ್‌ ಶೂ ಬೆಲೆ ₹7999. ಬಾಟಾ ಹಾಗೂ ಹಶ್‌ ಪಪ್ಪೀಸ್‌ ಸ್ಟೋರ್‌ಗಳಲ್ಲಿ ಲಭ್ಯ.

ADVERTISEMENT

**
ಮಾರುಕಟ್ಟೆಗೆ ವಿದ್ಯುತ್‌ ಚಾಲಿತ ಸ್ಕೂಟರ್‌
ಏವಾನ್‌ ಇಂಡಿಯಾ ವತಿಯಿಂದ ವಿದ್ಯುತ್‌ ಚಾಲಿತ ಸ್ಕೂಟರ್‌ ‘ಟ್ರೆಂಡ್‌ ಇ’ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಇದರ ಎಕ್ಸ್ ಶೋ ರೂಂ ಬೆಲೆ ₹56,900 ಇದೆ. ಎಲ್ಲೆಡೆ ಬುಕ್ಕಿಂಗ್ ಆರಂಭವಾಗಲಿದೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ‘ಬಿ.ವಿ.ಟೆಕ್‌ ಎಕ್ಸ್‌ ಪೋ ಇಂಡಿಯಾ 2019’ ರ ಪ್ರದರ್ಶನ ಮೇಳದಲ್ಲಿ ಈ ವಾಹನವನ್ನು ಬಿಡುಗಡೆ ಮಾಡಲಾಯಿತು.

ಲೀಥಿಯಂ ಅಯಾನ್‌ ಬ್ಯಾಟರಿ ಹೊಂದಿರುವ ವಾಹನದ ಎಕ್ಸ್‌ಶೋ ರೂಂ ಬೆಲೆ ₹56,900 ಹಾಗೂ ಎರಡು ಬ್ಯಾಟರಿ ಹೊಂದಿರುವ ಸ್ಕೂಟರಿಗೆ ₹81,269 ಆಗಿದೆ. ಕೇವಲ ₹1,100 ಪಾವತಿಸಿ ಗಾಡಿಯನ್ನು ಬುಕ್‌ ಮಾಡಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ವಾಹನಗಳು ಕೆಂಪು–ಕಪ್ಪು, ಕಪ್ಪು–ಕೆಂಪು, ಬಿಳಿ–ನೀಲಿ ಬಣ್ಣಗಳಲ್ಲಿ ಲಭ್ಯ. ಗರಿಷ್ಠ 45 ಕಿ.ಮೀ ವೇಗದಲ್ಲಿ ಚಲಾಯಿಸಬಹುದಾಗಿದೆ. ಗರಿಷ್ಠ ಪ್ರಮಾಣದಲ್ಲಿ ಚಾರ್ಜ್‌ ಮಾಡಲಾದ ಒಂದು ಬ್ಯಾಟರಿ 60ಕಿ.ಮೀ ವರೆಗೂ ಕ್ರಮಿಸಲಿದೆ. ಎರಡು ಬ್ಯಾಟರಿಯುಳ್ಳ ಸ್ಕೂಟರ್ 110 ಕಿ.ಮೀ ವರೆಗೆ ಕ್ರಮಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.