ADVERTISEMENT

‘ಕುಟ್ಟಿ – ಒಂದು ನೆನಪು’ ವ್ಯಂಗ್ಯಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:46 IST
Last Updated 10 ಡಿಸೆಂಬರ್ 2019, 19:46 IST
ಪಿ.ಕೆ.ಎಸ್. ಕುಟ್ಟಿ
ಪಿ.ಕೆ.ಎಸ್. ಕುಟ್ಟಿ   

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಡಿ. 14ರಿಂದ ಖ್ಯಾತ ವ್ಯಂಗ್ಯಚಿತ್ರಕಾರ ಪಿ.ಕೆ.ಎಸ್. ಕುಟ್ಟಿ ಅವರ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್ ಪ್ರದರ್ಶನ ‘ಕುಟ್ಟಿ – ಒಂದು ನೆನಪು’ ಆಯೋಜಿಸಿದೆ.

ಕೇರಳದ ಒಟ್ಟಪಾಲಮ್‍ನವರಾದ ಕುಟ್ಟಿ ಅವರು, ದೇಶದ ಹಲವು ಪ್ರಮುಖ ಪತ್ರಿಕೆಗಳಾದ ನ್ಯಾಷನಲ್ ಹೆರಾಲ್ಡ್, ಫ್ರೀ ಪ್ರೆಸ್ ಜರ್ನಲ್, ಹಿಂದುಸ್ತಾನ್ ಸ್ಟಾಂಡರ್ಡ್, ಆನಂದಬಜಾರ್ ಪತ್ರಿಕಾ, ಆಜ್‍ಕಾಲ್ ಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ್ದಾರೆ. ಅವರು ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಪಿಳ್ಳೈ ಅವರನ್ನು ತಮ್ಮ ಗುರು ಎಂದು ಹೇಳುತ್ತಿದ್ದರು. ಶಂಕರ್ಸ್ ವೀಕ್ಲಿ ಪತ್ರಿಕೆಯಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು.

ಭಾರತದ ಸ್ವಾತಂತ್ರ್ಯಪೂರ್ವದಿಂದ ನಡೆದ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಕುಟ್ಟಿ ಅವರ ವ್ಯಂಗ್ಯಚಿತ್ರಗಳಲ್ಲಿ ನಾವು ಕಾಣಬಹುದು. ಈ ಪ್ರದರ್ಶನದಲ್ಲಿ ಅವರ 60 ರಾಜಕೀಯ ವ್ಯಂಗ್ಯಚಿತ್ರಗಳನ್ನು ಮತ್ತು ಕ್ಯಾರಿಕೇಚರ್‌ಗಳನ್ನು ಪ್ರದರ್ಶಿಸಲಾಗುತ್ತಿದೆ.

ADVERTISEMENT

‘ಕುಟ್ಟಿ – ಒಂದು ನೆನಪು’: ಉದ್ಘಾಟನೆ–ಚೀಪುರು ಕಿರಣ್ ಕುಮಾರ್. ಸ್ಥಳ– ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ. 1 ಮಿಡ್ ಫೋರ್ಡ್‌ ಹೌಸ್‌, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ, ಡಿ.14, ಬೆಳಿಗ್ಗೆ 11. ಈ ಪ್ರದರ್ಶನವು ಡಿ.28ರವರಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.