ADVERTISEMENT

ವಿದ್ಯಾರ್ಥಿಗಳ ವಿನ್ಯಾಸ ಪ್ರತಿಭೆಯ ಡಿಸೈನ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:45 IST
Last Updated 17 ಸೆಪ್ಟೆಂಬರ್ 2019, 19:45 IST
ಡಿಸೈನ್‌ ಚಾಂಪಿಯನ್‌ಶಿಪ್‌–2019 ಲಾಂಛನ
ಡಿಸೈನ್‌ ಚಾಂಪಿಯನ್‌ಶಿಪ್‌–2019 ಲಾಂಛನ   

ವಿದ್ಯಾರ್ಥಿಗಳ ತಂತ್ರಜ್ಞಾನ ಮತ್ತು ವಿನ್ಯಾಸ ಪ್ರತಿಭೆ ಉತ್ತೇಜಿಸಲು ಮೈಂಡ್‌ಬಾಕ್ಸ್‌ ಸಂಸ್ಥೆಯು ಬೆಂಗಳೂರಿನಲ್ಲಿ ‘ಡಿಸೈನ್‌ ಚಾಂಪಿಯನ್‌ಶಿಪ್‌–2019’ ಸ್ಪರ್ಧೆ ಏರ್ಪಡಿಸಿದೆ.

ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಇರುವ ಮಂಜುನಾಥ ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಸೆಪ್ಟೆಂಬರ್‌ 18ರಂದು ಸ್ಪರ್ಧೆ ನಡೆಯಲಿದೆ. ಗೇಮ್‌ ಡಿಸೈನ್ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳು ಹೈದರಾಬಾದ್‌ನಲ್ಲಿ ನವೆಂಬರ್ 22 ಮತ್ತು 23ರಂದು ನಡೆಯಲಿರುವ ‘ಇಂಡಿಯಾ ಗೇಮ್‌ ಡೆವಲಪರ್‌ ಕಾನ್ಫೆರೆನ್ಸ್‌ 2019’ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ನಾಸ್ಕಾಂ ಗೇಮಿಂಗ್‌ ಫೋರಂ, ಸ್ಟ್ರೇಟ್‌ ಸ್ಕೂಲ್‌ ಆಫ್‌ ಡಿಸೈನ್‌ ಮತ್ತು ಮ್ಯಾಡ್‌ ಲರ್ನ್‌ ಸಹಯೋಗದಲ್ಲಿ ನಡೆಯಲಿರುವ ಸ್ಪರ್ಧೆಯನ್ನು ಜ್ಯೂನಿಯರ್‌ (9–12 ವರ್ಷ) ಮತ್ತು ಸಿನಿಯರ್ (13–16 ವರ್ಷ) ವಿಭಾಗಗಳೆಂದು ವಿಂಗಡಿಸಲಾಗಿದೆ.

ADVERTISEMENT

ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಸ್ಪರ್ಧೆಯನ್ನು ಗೇಮ್‌ ಡಿಸೈನ್‌, ಆ್ಯಪ್‌ ಡಿಸೈನ್‌, ಮೂವಿ ಮೇಕಿಂಗ್‌, ಇಂಡಸ್ಟ್ರೀಯಲ್‌ ಡಿಸೈನ್‌ ಮತ್ತು ಗ್ರಾಫಿಕ್‌ ಡಿಸೈನ್‌ ಎಂದು ವಿಭಾಗಿಸಲಾಗಿದೆ. ಗ್ರಾಫಿಕ್‌ ಡಿಸೈನ್‌ ವಿಭಾಗ (2–3 ಸದಸ್ಯರು ಮಾತ್ರ) ಹೊರತುಪಡಿಸಿ ಉಳಿದೆಲ್ಲ ವಿಭಾಗಗಳಲ್ಲಿ 2–5 ವಿದ್ಯಾರ್ಥಿಗಳ ತಂಡ ಭಾಗವಹಿಸಲು ಅವಕಾಶವಿದೆ.

ವಿದ್ಯಾರ್ಥಿಗಳು ತಾವು ಅಭಿವೃದ್ಧಿಪಡಿಸಿದ ಡಿಸೈನ್‌ ಮತ್ತು ಪ್ರಾಜೆಕ್ಟ್ಸ್‌ಗಳನ್ನು ಪ್ರದರ್ಶಿಸಬಹುದು. ಉದ್ಯಮಿಗಳು ಮತ್ತು ತಂತ್ರಜ್ಞಾನ ತಜ್ಞರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.ಐದನೇ ಆವೃತ್ತಿಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಶಾಲೆಗಳ ಮಕ್ಕಳು ಭಾಗವಹಿಸಲು ಮುಕ್ತ ಅವಕಾಶವಿದೆ.

ಮುಂಬೈ, ಹೈದರಾಬಾದ್, ದೆಹಲಿ, ಮದುರೆ, ಕೊಯಿಮತ್ತೂರು, ಚೆನ್ನೈ, ಲಖನೌಗಳಲ್ಲಿ ಈಗಾಗಲೇ ಸ್ಪರ್ಧೆಗಳು ಮುಗಿದಿವೆ. ಬೆಂಗಳೂರು ಮತ್ತು ಕೊಚ್ಚಿಯಲ್ಲಿ ಸ್ಪರ್ಧೆಗಳು ನಡೆಯಬೇಕಿದೆ.

ಶಾಲೆಗಳಲ್ಲಿ ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಮೈಂಡ್‌ ಬಾಕ್ಸ್‌ ಸಂಸ್ಥೆ STEAM ಶಿಕ್ಷಣ ನೀಡುತ್ತಿದೆ. ಸ್ಟೀಮ್‌ ಎಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಕಲೆ ಮತ್ತು ಗಣಿತದ ಎಲ್ಲ ಆಯಾಮಗಳನ್ನು ಕಲಿಸಲಾಗುತ್ತದೆ.

ಸಂಪರ್ಕ: 88600 10862, ಮಾಹಿತಿಗಾಗಿwww.designchampionship.in/info@designchampionship.in⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.