ADVERTISEMENT

ಸರ್ಕಾರಿ ಶಾಲಾ ಮಕ್ಕಳಿಗಾಗಿ ಮಕ್ಕಳ ಹಬ್ಬ

ಪ್ರಭಾಕರ ಆರ್‌.
Published 21 ನವೆಂಬರ್ 2018, 19:45 IST
Last Updated 21 ನವೆಂಬರ್ 2018, 19:45 IST
   

ಬಡ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ನಗರದ ಸುರಭಿ ಫೌಂಡೇಷನ್ ಟ್ರಸ್ಟ್‌ ‘ಸುರಭಿ ಚಿನ್ನರ ಸಂಭ್ರಮ 2018’ ಅಂತರ ಸರ್ಕಾರಿ ಶಾಲಾ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇದೇ 22ರಂದು ಹಮ್ಮಿಕೊಂಡಿದೆ.

ಈ ಎನ್‌ಜಿಒ ಐದು ವರ್ಷಗಳಿಂದ ಪ್ರತಿ ವರ್ಷ ಮಕ್ಕಳ ಹಬ್ಬದ ಮೂಲಕ ಮಕ್ಕಳಿಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ. ಮಕ್ಕಳ ಹಬ್ಬದಲ್ಲಿ ನಗರದ ಸುಮಾರು 40 ರಿಂದ 50 ಸರ್ಕಾರಿ ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ.

ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:ಬಾಲಕರಿಗಾಗಿ ಪೊಟ್ಯಾಟೊ ರೇಸ್, ಹಿಟ್ಟಿಂಗ್ ದಿ ವಿಕೆಟ್, ಲೆಮನ್‌ ಅಂಡ್ ಸ್ಪೂನ್, ಮೆಮೊರಿ ಗೇಮ್, ಮೂರು ಕಾಲಿನ ಓಟ, 50 ಮೀ ಓಟ. ಬಾಲಕಿಯರಿಗೆ ಬಕೆಟ್‌ನಲ್ಲಿ ಚೆಂಡು ಹಾಕುವುದು, ಸೂಜಿ ದಾರ ಆಟ, ಬಲೂನ್ ಒಡೆಯುವುದು, ಮ್ಯೂಸಿಕಲ್ ಚೇರ್‌,50 ಮೀ ಓಟದ ಸ್ಪರ್ಧೆ,ಶಾಟ್‌ ಪಟ್ ಮುಂತಾದ ಆಟಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಬಾಲಕ, ಬಾಲಕಿಯರಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಮತ್ತು ವಿವಿಧ ಬಗೆಯ ಕರಕುಶಲ ಕಲಾ ಸ್ಪರ್ಧೆಗಳು ನಡೆಯಲಿವೆ.

ADVERTISEMENT

ಗುಂಪು ಆಟಗಳು: ಐದರಿಂದ 10ನೇ ತರಗತವರೆಗಿನ ವಿದ್ಯಾರ್ಥಿಗಳಿಗೆ ವಾಲಿಬಾಲ್ (ಬಾಲಕರಿಗೆ), ಕಬಡ್ಡಿ (ಬಾಲಕಿಯರಿಗೆ) ಕ್ರೀಡೆಗಳನ್ನೂ ಆಯೋಜಿಸಲಾಗಿದೆ.

ಇವುಗಳ ಜತೆಗೆ ಜನಪದ, ಭರತನಾಟ್ಯ ನೃತ್ಯ ಪ್ರಕಾರಗಳು ಹಾಗೂ ದೇಶಭಕ್ತಿ ಗೀತೆ, ಭಾವಗೀತೆಗಳ ಗಾಯನ ಸ್ಪರ್ಧೆಗಳೂ ನಡೆಯಲಿವೆ.

ಸುರಭಿ ಚಿನ್ನರ ಸಂಭ್ರಮ ಕಾರ್ಯಕ್ರಮ ಗುರುವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟನೆಯಾಗಲಿದೆ. ಅತಿಥಿಗಳಾಗಿ ವಿಧಾನ ಪರಿಷತ್ತಿನ ಸದಸ್ಯ ಯು.ಬಿ. ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಲ್. ರಮೇಶಯ್ಯ, ಸುರಭಿ ಫೌಂಡೇಷನ್‌ ಟ್ರಸ್ಟ್‌ನ ನಿರ್ದೇಶಕ ಡಾ. ಎ.ಎಸ್‌.ಪಾಟೀಲ್‌ ಪಾಲ್ಗೊಳ್ಳುವರು. ಸಮಾರೋಪ ಸಮಾರಂಭ ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಎಂ. ಕೃಷ್ಣಪ್ಪ ಪಾಲ್ಗೊಳ್ಳುವರು.

ಸ್ಥಳ: ತೀರ್ಥ ಆಶ್ರಮ, 128/1, ಸಂತೃಪ್ತಿ ಲೇಔಟ್, ಜೆ.ಪಿ.ನಗರ, 7ನೇ ಹಂತ, ಬೆಂಗಳೂರು–560078

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.