ಯಕ್ಷಗಾನ ತಪಸ್ಸಂಘ ಈಚೆಗೆ ಉದಯಭಾನು ಕಲಾಸಂಘದಲ್ಲಿ ಆಯೋಜಿಸಿದ್ದ ‘ಭಸ್ಮಾಸುರ ಮೋಹಿನಿ’ ಪೌರಾಣಿಕ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ಪ್ರದರ್ಶನ ಕಂಡಿತು.
ಈಶ್ವರನಾಗಿ ರಾಮಕೃಷ್ಣ ಭಟ್ಟ ಹಳಕಾರ, ಪಾರ್ವತಿಯಾಗಿ ಸಾಯಿರಾಂ ಭಟ್ಟಿಪ್ರೋಲು, ಭಸ್ಮಾಸುರನಾಗಿ ಅಜಿತೇಶ ಹೆಗಡೆ ಸಾಗರ, ಬ್ರಾಹ್ಮಣನಾಗಿ ಕೃಷ್ಣಶೆಟ್ಟಿ ಕೆರಾಡಿ, ದೇವೇಂದ್ರನಾಗಿ ಸತ್ಯನಾರಾಯಣ ಭಟ್ಟ ಗಾಳಿ, ವಿಷ್ಣುವಾಗಿ ಗೌರೀಶ ಹೆಗಡೆ ಬೇರಂಕಿ ಹಾಗೂ ಮೋಹಿನಿಯಾಗಿ ರಾಧಾಕೃಷ್ಣ ಬೆಳೆಯೂರು ಪ್ರೇಕ್ಷಕರನ್ನು ರಂಜಿಸಿದರು.
ಹಿಮ್ಮೇಳನದಲ್ಲಿ ಮಂಜುನಾಥ ಹೆಗಡೆ ಹುಲ್ಲಾಳಗದ್ದೆ, ಭರತೋಟ ಗಣಪತಿ ಭಟ್ಟ ಭಾಗವತಿಕೆ ನಡೆಸಿಕೊಟ್ಟರು. ನಾರಾಯಣ ಹೆಬ್ಬಾರ್ ಕಳಚೆ, ರಾಜೇಶ ಆಚಾರ್ ಸಾಗರ (ಮೃದಂಗ), ನಾಗಭೂಷಣ ಕೇಡಲಸರ, ಸಂಪ ಲಕ್ಷ್ಮೀನಾರಾಯಣ ಹೆಗಡೆ (ಚಂಡೆ) ವಾದ್ಯ ಸಹಕಾರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.