ADVERTISEMENT

ಕಡಿಮೆ ಬಡ್ಡಿ ದರಕ್ಕೆ ಬದಲಾಗುವ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2012, 19:30 IST
Last Updated 27 ಮಾರ್ಚ್ 2012, 19:30 IST

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ತನ್ನ ಹಳೆಯ ಗೃಹ ಸಾಲಗಾರರು, ಹೊಸ `ಬದಲಾಗುವ ಬಡ್ಡಿ ದರ~ಗಳಿಗೆ ವರ್ಗಾವಣೆಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಬ್ಯಾಂಕ್‌ನ ಅಂದಾಜು 6 ಲಕ್ಷದಷ್ಟು ಸಾಲಗಾರರಿಗೆ ಪ್ರಯೋಜನ ದೊರೆಯುವ ನಿರೀಕ್ಷೆ ಇದೆ.

ಗೃಹ ಸಾಲದ ಪೂರ್ವ ಪಾವತಿ ಮೇಲಿನ ದಂಡದ ಶುಲ್ಕ ರದ್ದುಪಡಿಸಿ ಮೇಲ್ಪಂಕ್ತಿ ಹಾಕಿದ್ದ ಬ್ಯಾಂಕ್, ಈಗ ಕಡಿಮೆ ಬಡ್ಡಿ ದರಕ್ಕೆ ಬದಲಾಗುವ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ತನ್ನ `ಗ್ರಾಹಕ ಸ್ನೇಹಿ~ ಕ್ರಮಗಳನ್ನು ಮುಂದುವರೆಸಿದೆ.

ಗರಿಷ್ಠ ಮಟ್ಟದಲ್ಲಿನ ಬಡ್ಡಿ ದರಗಳ ಹಿನ್ನೆಲೆಯಲ್ಲಿ ಗೃಹ ಸಾಲಗಾರರು ಇತರ ಬ್ಯಾಂಕ್‌ಗಳಿಗೆ ತಮ್ಮ ಗೃಹ ಸಾಲ ವರ್ಗಾಯಿಸಲು ಚಿಂತಿಸುತ್ತಿರುವ ಸಂದರ್ಭದಲ್ಲಿಯೇ ಈ ಕೊಡುಗೆ ಪ್ರಕಟಿಸಲಾಗಿದೆ.ಈ ಮೊದಲು ಗರಿಷ್ಠ ಬಡ್ಡಿ ದರ (ಪಿಎಲ್‌ಆರ್) ಅಥವಾ ಆರಂಭಿಕ ವರ್ಷದಲ್ಲಿ ಕಡಿಮೆ ಬಡ್ಡಿ ದರ `ಟೀಸರ್ ದರ~ (ಠಿಛಿಛ್ಟಿ ್ಟಠಿಛಿ) ಪಾವತಿಸುವ ಅವಕಾಶ ಬಳಸಿಕೊಂಡಿದ್ದ ಗೃಹ ಸಾಲಗಾರರು, ಈಗ ಬ್ಯಾಂಕ್ ಒದಗಿಸಿರುವ ಈ ಹೊಸ ಸೌಲಭ್ಯವನ್ನೂ ಪಡೆದುಕೊಳ್ಳಬಹುದು.

ಬ್ಯಾಂಕ್‌ನ ನಿರ್ಧಾರದಿಂದಾಗಿ ಇದುವರೆಗೆ `ಮೂಲ ದರ~ಕ್ಕಿಂತ ಶೇ 2ರಿಂದ 3ರಷ್ಟು ಹೆಚ್ಚು ಬಡ್ಡಿ ದರ ಪಾವತಿಸುತ್ತಿದ್ದ ಸಾಲಗಾರರು ಇನ್ನು ಮುಂದೆ ಕಡಿಮೆ ಬಡ್ಡಿ ದರ ಇರುವ ಹೊಸ `ಬದಲಾಗುವ ಬಡ್ಡಿ ದರ~ ವ್ಯವಸ್ಥೆಗೆ ಬದಲಾಗಬಹುದು.

ಬ್ಯಾಂಕ್‌ನ `ಮೂಲ ದರ~ವು (ಆಛಿ ್ಕಠಿಛಿ), ಗರಿಷ್ಠ ಬಡ್ಡಿ ದರಕ್ಕಿಂತ (ಪಿಎಲ್‌ಆರ್) ಕಡಿಮೆ ಇದೆ. ಸದ್ಯಕ್ಕೆ `ಎಸ್‌ಬಿಐ~ನ `ಮೂಲ ದರ~ವು ಶೇ 10ರಷ್ಟಿದ್ದರೆ, `ಪಿಎಲ್‌ಆರ್~ ಶೇ 14.75ರಷ್ಟಿದೆ.
 

ನಿಬಂಧನೆ ಇಲ್ಲ
ಹೊಸ ಬಡ್ಡಿ ದರ ವ್ಯವಸ್ಥೆಗೆ ಬದಲಾಗಲು ಯಾವುದೇ ನಿಬಂಧನೆ ವಿಧಿಸಲಾಗಿಲ್ಲ. ನಿರ್ದಿಷ್ಟ ಸಾಲದ ಅವಧಿ ಅಥವಾ ಸಾಲದ ಮೊತ್ತವಾಗಲಿ ನಿಗದಿಪಡಿಸಿಲ್ಲ. ಪಾವತಿಸಬೇಕಾದ ಒಟ್ಟು ಗೃಹ ಸಾಲದ ಮೇಲೆ ಶೇ 1ರಷ್ಟು ಶುಲ್ಕ ಪಾವತಿಸಿ ಹೊಸ ಬಡ್ಡಿ ದರ ವ್ಯವಸ್ಥೆಗೆ ಬದಲಾಗಬಹುದು.

ಸದ್ಯಕ್ಕೆ ಬ್ಯಾಂಕ್, ರೂ 30 ಲಕ್ಷಕ್ಕೆ ಶೇ 10.5, ರೂ 30ರಿಂದ 75 ಲಕ್ಷಕ್ಕೆ ಶೇ 10.75 ಮತ್ತು  ರೂ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 11ರಷ್ಟು ಬಡ್ಡಿ ವಿಧಿಸುತ್ತಿದೆ.`ಎಸ್‌ಬಿಐ~ನಲ್ಲಿ ಒಂದು ವರ್ಷದ ಹಿಂದೆಯಷ್ಟೆ ಗೃಹ ಸಾಲ ಪಡೆದವರೂ ಗರಿಷ್ಠ ಬಡ್ಡಿ ದರ ಪಾವತಿಸುತ್ತಿದ್ದಾರೆ. ಕೆಲ ಗ್ರಾಹಕರಿಗೆ ಸಂಬಂಧಿಸಿದಂತೆ ಗರಿಷ್ಠ ಶೇ 3ರಷ್ಟು ಹೆಚ್ಚು ಬಡ್ಡಿ ವಸೂಲಿ ಮಾಡಲಾಗುತ್ತಿದೆ.

ಇದರಿಂದ ಗ್ರಾಹಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸದ್ಯದ `ಬದಲಾಗುವ ಬಡ್ಡಿ~ ದರಗಳನ್ನು ಹಳೆಯ ಗೃಹ ಸಾಲಗಾರರಿಗೂ ಅನ್ವಯಿಸಲು ಬ್ಯಾಂಕ್ ನಿರ್ಧರಿಸಿದೆ.ಹೊಸ ಬಡ್ಡಿ ದರ ವ್ಯವಸ್ಥೆಗೆ ಬದಲಾಗಲು ಬಯಸುವ ಗ್ರಾಹಕರು ಸುಸ್ತಿದಾರರು ಆಗಿರಬಾರದಷ್ಟೆ.

ಸುಸ್ತಿದಾರರಾಗಿದ್ದರೂ ಹೊಸ ಕಡಿಮೆ ಬಡ್ಡಿ ದರದ ಸೌಲಭ್ಯ ಪಡೆಯಲು ಇಚ್ಛಿಸಿದರೆ, ಬಾಕಿ ಮೊತ್ತವನ್ನೆಲ್ಲ ಕಡ್ಡಾಯವಾಗಿ ಪಾವತಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT