ADVERTISEMENT

ಫ್ಯಾಕ್ಟ್‌ ಚೆಕ್‌: ಮೋದಿ ಕಾಶ್ಮೀರಕ್ಕೆ ರೈಲು ಸಂಪರ್ಕ ದೊರೆಯುವಂತೆ ಮಾಡಿದರೇ?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 22:00 IST
Last Updated 14 ಫೆಬ್ರುವರಿ 2021, 22:00 IST
   

ಕಾಶ್ಮೀರ ಕಣಿವೆಯಲ್ಲಿ ಶೀಘ್ರವೇ ರೈಲು ಸೇವೆ ಆರಂಭವಾಗಲಿದೆ. 7 ದಶಕಗಳಿಂದ ಕಾಶ್ಮೀರ ಕಣಿವೆಯ ಜನರಿಗೆ ಲಭ್ಯವಿರದಿದ್ದ ರೈಲು ಸೇವೆ ಈಗ ಲಭ್ಯವಾಗಲಿದೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ರೈಲು ಸಂಪರ್ಕ ದೊರೆಯುವಂತೆ ಮಾಡುತ್ತಾರೆ ಎಂದು ಪೋಸ್ಟ್‌ ಕಾರ್ಡ್‌ ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಇದು ವೈರಲ್ ಆಗಿದೆ.

ಕಾಶ್ಮೀರ ಕಣಿವೆಯಲ್ಲಿ 2008ರಿಂದಲೇ ರೈಲು ಸೇವೆ ಆರಂಭವಾಗಿದೆ. 2008ರ ಅಕ್ಟೋಬರ್‌ನಲ್ಲಿ ಅನಂತನಾಗ್ ಮತ್ತು ಮಝಾಹಂ ನಡುವೆ, 2009ರ ಫೆಬ್ರುವರಿಯಲ್ಲಿ ಮಝಾಹಂ ಮತ್ತು ಬಾರಾಮುಲ್ಲಾ ನಡುವೆ, 2009ರ ಅಕ್ಟೋಬರ್‌ನಲ್ಲಿ ಅನಂತನಾಗ್ ಮತ್ತು ಕಾಜೀಗುಂಡ್ ನಡುವೆ, 2013ರಲ್ಲಿ ಕಾಜೀಗುಂಡ್ ಮತ್ತು ಬನಿಹಾಲ್ ನಡುವೆ ರೈಲು ಸೇವೆ ಆರಂಭವಾಗಿದೆ.

ಈಗ ಉಧಂಪುರ-ಶ್ರೀನಗರ-ಬಾರಾಮುಲ್ಲಾ ಮಾರ್ಗದ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ರೈಲ್ವೆ ಇಲಾಖೆಯ ಜಾಲತಾಣದಲ್ಲಿದೆ. ಪೋಸ್ಟ್‌ ಕಾರ್ಡ್‌, ಫೇಸ್‌ಬುಕ್‌ನಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.