ವಿವಾದಿತ ಜಾಹೀರಾತು ಪ್ರಕಟಿಸಿದ ತನಿಷ್ಕ್ ಚಿನ್ನಾಭರಣ ಸಂಸ್ಥೆ ವಿರುದ್ಧ ದೆಹಲಿ ಜಾಮಿಯಾ ಮಸೀದಿಯ ಇಮಾಮ್ ಬುಖಾರಿ ಅವರು ಫತ್ವಾ ಹೊರಡಿಸಲು ನಿರ್ಧರಿಸಿದ್ದಾರೆ. ಮುಸ್ಲಿಂ ಸಂಪ್ರದಾಯದಲ್ಲಿ ಸೀಮಂತ ಪದ್ಧತಿ ಇಲ್ಲ. ಹೀಗಾಗಿ ತನಿಷ್ಕ್‌ನವರು ಮುಸ್ಲಿಂ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆ ಎಂದು ಇಮಾಮ್ ಆರೋಪಿಸಿದ್ದಾರೆ ಎನ್ನಲಾದ ಟ್ವೀಟ್ ವೈರಲ್ ಆಗಿದೆ. ಸಾಕಷ್ಟು ಜನರು ಇದನ್ನು ಹಂಚಿಕೊಂಡಿದ್ದಾರೆ.
ಸತ್ಯಾಸತ್ಯತೆ ಪರಿಶೀಲನೆ ನಡೆಸಿದ ‘ಆಲ್ಟ್ ನ್ಯೂಸ್’ಗೆ ಬುಖಾರಿ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್ ಸಿಕ್ಕಿಲ್ಲ. ನೇರವಾಗಿ ಅವರನ್ನು ಸಂಪರ್ಕಿಸಿದಾಗ,ಫತ್ವಾ ಹೊರಡಿಸುವ ಹೇಳಿಕೆ ನೀಡಿಲ್ಲ ಎಂಬುದು ಖಚಿತಪಟ್ಟಿದೆ. ಜಾಹೀರಾತು ಎರಡೂ ಧರ್ಮಗಳ ನಡುವಿನ ಭಾತೃತ್ವವನ್ನು ಸಾರುತ್ತದೆ ಎಂದು ಅವರು ಶ್ಲಾಘಿಸಿರುವ ಟ್ವೀಟ್ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.